janadhvani

Kannada Online News Paper

KCF ಡೇ ಪ್ರಯುಕ್ತ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮ

ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಹಯ್ಯುಲ್ ಮುರೂಜ್ ಸೆಕ್ಟರ್ ವತಿಯಿಂದ KCF FOUNDATION ಪ್ರಯುಕ್ತ “ಸ್ವಲಾತ್ ಮಜ್ಲಿಸ್” ಪ್ರಾರ್ಥನಾ ಸಂಗಮ ಕಾರ್ಯಕ್ರಮ ದಿನಾಂಕ 19,02,2021 ರಂದು ಶುಕ್ರವಾರ ಬೆಳಿಗ್ಗೆ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರುರವರ ಅದ್ಯಕ್ಷತೆಯಲ್ಲಿ ಜರಗಿತು,

KCF ಮುರೂಜ್ ಸೆಕ್ಟರ್ ಮಾಜಿ ಅದ್ಯಕ್ಷರಾದ PK ದಾವೂದ್ ಸಅದಿ ಉರುವಾಲು ಪದವು ಉದ್ಘಾಟಿಸಿದರು. KCF ರಿಯಾದ್ ಝೋನ್ ಸಂಘಟನೆ ಇಲಾಖೆಯ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಕಿಲ್ಲೂರು KCF ಎಂಬ ಮಹತ್ತರವಾದ ಸಂಘಟನೆಯ ಬಗ್ಗೆ ಉತ್ತಮ ಶೈಲಿಯಲ್ಲಿ ಮನಮುಟ್ಟುವಂತೆ ಸಂದೇಶ ಭಾಷಣ ಮಾಡಿದರು.

KCF ರಿಯಾದ್ ಝೋನ್ ಪ್ರಕಾಶನ ವಿಭಾಗದ ಕನ್ವೀನರ್ ಹಾಗೂ ಮುರೂಜ್ ಸೆಕ್ಟರ್ ಉಸ್ತುವಾರಿ ಹನೀಫ್ ಕನ್ನೂರು, ಸಹ ಉಸ್ತುವಾರಿ ಅಬ್ದುಲ್ ರಝಾಕ್ ಬಾರ್ಯ, ದರಇಯ್ಯ ಯೂನಿಟ್ ಅದ್ಯಕ್ಷರಾದ ಮುಹಮ್ಮದ್ ಹಾರಿಸ್ ಪರ್ಲಿಯಃ, ಮುರ್ಸಲಾತ್ ಯೂನಿಟ್ ಅದ್ಯಕ್ಷರಾದ KH ಇಬ್ರಾಹಿಂ K ಹೊಸಕೋಟೆ, ದಲ್ಲ ಯೂನಿಟ್ ಅದ್ಯಕ್ಷರಾದ ಅಮೀರ್ ಮಾಣಿ,ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೆಕ್ಟರ್ ಇತರ ಇಲಾಖೆಯ ನಾಯಕರು, ಯೂನಿಟ್ ನಾಯಕರು ,ಉಪಸ್ಥಿತರಿದ್ದರು.KCF ಮುರೂಜ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ನೆಲ್ಯಾಡಿ ಸ್ವಾಗತಿಸಿ ವಂದಿಸಿದ ಸಭೆಯು ಮೂರು ಸ್ವಲಾತ್ನೊಂದಿಗೆ ಮುಕ್ತಾಯವಾಯಿತು.

error: Content is protected !! Not allowed copy content from janadhvani.com