janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕಳೆದ ಎಂಟು ವರ್ಷಗಳಿಂದ ಉತ್ತಮವಾದ ರೀತಿಯಲ್ಲಿ ಕಾರ್ಯಾಚರಿಸಿ ಈಗ ಒಂಬತ್ತನೇ ವರ್ಷದ ಫೌಂಡೇಶನ್ ಡೇಯನ್ನು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಫೆಬ್ರವರಿ 19ರಂದು ಝೂಮ್ ಮೂಲಕ ಆಚರಿಸಲಾಯಿತು.

ಡಾ| ಮುಹಮ್ಮದ್ ಫಾಝಿಲ್ ರಝ್ವೀ ಕಾವಲಕಟ್ಟೆಯವರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದಕ್ಕೆ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆಯವರು ಸ್ವಾಗತ ಭಾಷಣ ಮಾಡಿದರು.

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು| ಡಿಪಿ ಯೂಸುಫ್ ಸಖಾಫಿ ಬೈತಾರ್ ರವರ ಅಧ್ಯಕ್ಷತೆಯ ಕಾರ್ಯಕ್ರಮವನ್ನು ಅಂತರ್ರಾಷ್ಟ್ರೀಯ ಸಮಿತಿ ಇಹ್ಸಾನ್ ಇಲಾಖೆಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ರೈಸ್ಕೋ ರವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ| ಹುಸ್ಸೈನ್ ಸಖಾಫಿ ಚುಳ್ಳಿಕ್ಕೋಡು ರವರು ಮುಖ್ಯ ಪ್ರಭಾಷಣ ಮಾಡಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯಿಂದ ಮುಂದಿನ ವರ್ಷದಲ್ಲಿ ನಡೆಸಲು ಉದ್ದೇಶಿಸಿದ ಹತ್ತು ಯೋಜನೆಗಳನ್ನು ಘೋಷಣೆ ಮಾಡಿದರು.

ಅಂತರ್ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ ಹಾಗೂ ಪ್ರಕಾಶನ ಇಲಾಖೆಯ ಅಧ್ಯಕ್ಷರಾದ ನಝೀರ್ ಹಾಜಿ ಕಾಶಿಪಟ್ನ ರವರು ಕಾರ್ಯಕ್ರಮದಲ್ಲಿ ಆಶಂಸ ಮಾತುಗಳನ್ನು ಆಡಿದರು.

ಕೆಸಿಎಫ್ ಫೌಂಡೇಶನ್ ಡೇ ಪ್ರಯುಕ್ತ ಈ ಮೊದಲೇ ನಡೆಸಿದ್ದ ವೀಡಿಯೋ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ವಿಜಯಿಗಳಾದವರ ಹೆಸರನ್ನು ಗಲ್ಫ್ ಇಶಾರ ಪತ್ರಿಕೆಯ ಸಂಪಾದಕರಾದ ಸ್ವಾಲಿಹ್ ತೋಡಾರ್ ರವರು ಘೋಷಣೆ ಮಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರೀಯ ಸಮಿತಿ ಇಹ್ಸಾನ್ ಇಲಾಖೆಯ ಅಧ್ಯಕ್ಷರಾದ ಉಮರ್ ಅಳಕೆಮಜಲು ರವರ ನೇತ್ರತ್ವದಲ್ಲಿ ಕ್ವಿಝ್ ಸ್ಪರ್ಧೆ ನಡೆಸಿ ಸಂಘಟನಾ ಇಲಾಖೆಯ ಅಧ್ಯಕ್ಷರಾದ ಫೈಸಲ್ ಕೃಷ್ಣಾಪುರ ರವರು ವಿಜಯಿಗಳನ್ನು ಘೋಷಣೆ ಮಾಡಿದರು.

ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆ ಯವರು ನಿರೂಪಣೆ ಮಾಡಿದ ಕಾರ್ಯಕ್ರಮದ ಕೊನೆಯಲ್ಲಿ ಕಯ್ಯೂಮ್ ಜಾಲ್ಸೂರ್ ರವರು ಕೆಸಿಎಫ್ ಹಾಡುಗಳನ್ನು ಹಾಡಿ ಸಂಘಟನಾ ಇಲಾಖೆಯ ಕಾರ್ಯದರ್ಶಿ ಬಶೀರ್ ತಲಪ್ಪಾಡಿಯವರು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com