ಇಸ್ಲಾಂ ಯಾವತ್ತೂ ಸಂಯಮ ಮತ್ತು ಶಾಂತಿಗೆ ಮಹತ್ವ ನೀಡುವ ಧರ್ಮ. ಭಿನ್ನತೆಗಳನ್ನು ಸೈದ್ದಾಂತಿಕ ವಾಗಿಯೂ ಕಾನೂನುಗಳ ಮೂಲಕವೂ ಎದುರಿಸಬೇಕು
ಮಂಗಳೂರು: ಎಲ್ಲ ಜಾತಿ ಮತ ಧರ್ಮದ ಅನುಯಾಯಿಗಳು ಪರಸ್ಪರ ಸಾಮರಸ್ಯ ಮತ್ತು ಸಹಿಷ್ಣುತೆಯಿಂದ ಬದುಕುವುದು ನಮ್ಮ ನಾಡಿನ ಸೌಹಾರ್ದ ಪರಂಪರೆ. ಇದಕ್ಕೆ ಧಕ್ಕೆ ತರುವ ರೀತಿಯಲ್ಲಿ, ಕೆಲವು ರಾಜಕೀಯ ಪಕ್ಷಗಳ ನಾಯಕರು ಬಹಿರಂಗ ವೇದಿಕೆಗಳಲ್ಲಿ ಸಂಘರ್ಷಕ್ಕೆ ಆಹ್ವಾನ ನೀಡುತ್ತಿರುವುದು ಖಂಡನೀಯವೆಂದು ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಕರ್ನಾಟಕ ರಾಜ್ಯ ಸಮಿತಿ ಪ್ರಸ್ತಾಪಿಸಿದೆ.
ಇದು ಸಮಾಜದ ವಿವಿಧ ವರ್ಗಗಳ ಮಧ್ಯೆ ಅಪನಂಬಿಕೆ ಮತ್ತು ಸಂದೇಹಕ್ಕೆ ಕಾರಣವಾಗಲಿದೆ. ಇಸ್ಲಾಂ ಯಾವತ್ತೂ ಸಂಯಮ ಮತ್ತು ಶಾಂತಿಗೆ ಮಹತ್ವ ನೀಡುವ ಧರ್ಮ. ಭಿನ್ನತೆಗಳನ್ನು ಸೈದ್ದಾಂತಿಕ ವಾಗಿಯೂ ಕಾನೂನುಗಳ ಮೂಲಕವೂ ಎದುರಿಸಬೇಕು. ಅದಲ್ಲದೆ ಪರಸ್ಪರರನ್ನು ಎತ್ತಿಕಟ್ಟುವ ಕೆಲಸ ಆಗಬಾರದು.ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸಮುದಾಯವನ್ನು ಬಲಿಕೊಡುವ ಕೆಲಸದಿಂದ ಅಂತಹ ನಾಯಕರು ಬಿಟ್ಟು ನಿಲ್ಲಬೇಕೆಂದು ಎಸ್.ವೈ.ಎಸ್.ಕರೆನೀಡಿದೆ.
ಮೆಲ್ಕಾರ್ ಸುನ್ನೀ ಸೆಂಟರ್‌ನಲ್ಲಿ ಸೇರಿದ ರಾಜ್ಯ ಎಸ್.ವೈ.ಎಸ್.ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದರು. ಎಸ್.ಪಿ.ಹಂಝ ಸಖಾಫಿ,ಜಿ.ಎಂ.ಎಂ. ಕಾಮಿಲ್,ಅಬ್ದುಲ್ ಹಕೀಂ ಹಾಸನ, ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ಅಶ್ರಫ್ ಕಿನಾರಾ, ಡಿಕೆ ಉಮರ್ ಸಖಾಫಿ, ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಸ್ವಾಗತಿಸಿದರು.
ದೇಶದಲ್ಲಿ ಆರೆಸ್ಸೆಸ್ ನೇತೃತ್ವದ ಸಂಘಪರಿವಾರ ನಡೆಸುವ ದುಷ್ಕೃತ್ಯಗಳನ್ನೂ ಇಷ್ಟೇ ವೇಗದಲ್ಲಿ ಖಂಡಿಸುವ ಮನೋಭಾವ ಬೆಳೆಸಿಕೊಂಡರೆ ಇನ್ನೂ ಉತ್ತಮ.
Avaru maadida haage naavu maadidare avarigu namagu iruva vethyasavenu
ಸಂಘಪರಿವಾರ ಸಮುದಾಯದಮೇಲೆ ದಾಳಿಗಳು ನಡೆಸುವಾಗ ಯಾರುಕೋಡಾ ದ್ವನಿಯೆತ್ತೂದಿಲ್ಲ ಅವರವಿರುದ್ದ ಐಕ್ಯಹೋರಾಟ ನಡೆಸೂದಿಲ್ಲ ಆದರೆ ಸಂಘಪರಿವಾರದ ವಿರುದ್ದ ಯಾರಾದರೂ ಹೋರಾಟಮಾಡಿದರೆ ಅವರಿಗೆ ಎಚ್ಚರಿಕೆ ನೀಡಿದರೆ ಅದನ್ನು ಕಂಡಿಸುತ್ತಾರೆ ಇದು ಸಮುದಾಯದ ದುರಂತ
Rss 1925 ರಿಂದ ಮುಸ್ಲಿಂ ಸಮುದಾಯಕ್ಕೆ ಥಂಟ್ಟುತಃ ಇದ್ದರೆ, ನೀವು ಇನ್ನು ನಿದ್ರೆಯಲ್ಲಿ ಇದ್ದೀರಾ, ಹೇದ್ಹದು ಇವಗನೇ. ಎಂಚಿನ ಅವಸ್ಥೆಮಾರ್ರೇ 🙆♂️