ಬಂಟ್ವಾಳ, ಫೆ 07: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ – ಎಸ್.ಎಸ್.ಎಫ್ ಸಾಲೆತ್ತೂರ್ ಸೆಕ್ಟರ್ ವತಿಯಿಂದ ಸೆಕ್ಟರ್ ಪದಾಧಿಕಾರಿಗಳು ಹಾಗೂ ಸೆಕ್ಟರ್ ವ್ಯಾಪ್ತಿಯ ಯುನಿಟ್’ಗಳ ಪದಾಧಿಕಾರಿಗಳಿಗೆ ತಮ್ರೀನ್ ಕಾರ್ಯಕ್ರಮವು ಬಿ.ಎಚ್ ನಗರ ಮದ್ರಸ ಸಭಾಂಗಣದಲ್ಲಿ ಆದಿತ್ಯವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಲತೀಫಿ ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ಸ್ವಾಗತಿಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರು, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆಯವರು ಕಡತ ನಿರ್ವಹಣೆ, ಜವಾಬ್ದಾರಿ ಮತ್ತು ಸಮರ್ಪಿತ ನಾಯಕತ್ವ ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು, ಅಕ್ಬರ್ ಅಲಿ ಮದನಿ ಆಲಂಪಾಡಿ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಲೀ ಮದನಿ ಸೆರ್ಕಳ, ಬಿ.ಎಚ್ ಖತೀಬರು ಉಪಸ್ಥಿತರಿದ್ದರು, ಸೆಕ್ಟರ್ ಕಾರ್ಯದರ್ಶಿ ಹಾಫಿಲ್’ರವರು ವಂದಿಸಿದರು.
ಇನ್ನಷ್ಟು ಸುದ್ದಿಗಳು
ಮಾರ್ಚ್ 6-10:ಎಸ್ಸೆಸ್ಸೆಫ್ ರಾಜ್ಯ ಸಮಿತಿಯಿಂದ ಆನ್ಲೈನ್ ಇನ್ಸೆಪ್ಶನ್ ಕಾರ್ಯಾಗಾರ
ಇಶಾರ ಚಂದಾಭಿಯಾನ- SSF ಕೊಪ್ಪ ಡಿವಿಷನ್ ನಿಂದ ಪೋಸ್ಟರ್ ಪ್ರದರ್ಶನ
SSF ದ.ಕ ವೆಸ್ಟ್ ಜಿಲ್ಲಾ ವತಿಯಿಂದ ಲೀಡ್2K21 ಕ್ಯಾಂಪ್
ಮದನೀಸ್ ಅಸೋಸಿಯೇಷನ್: ರಾಜ್ಯ ಸಮಿತಿಗೆ ನವ ಸಾರಥ್ಯ
ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಖಂಡನೆ
ಮಾರ್ಚ್ 1-15: ಎಸ್ಸೆಸ್ಸೆಫ್ ಮುಖವಾಣಿ ಇಶಾರ ಚಂದಾಭಿಯಾನ