janadhvani

Kannada Online News Paper

ಮದನೀಸ್ ಪುತ್ತೂರು ತಾಲೂಕು: ನೂತನ ಪದಾಧಿಕಾರಿಗಳ ಆಯ್ಕೆ

ಮದನೀಸ್ ಅಸೋಸಿಯೇಷನ್ ಪುತ್ತೂರು ತಾಲೂಕು ಇದರ ಮಹಾಸಭೆಯು ಇತ್ತೀಚಿಗೆ ಪುತ್ತೂರು ಮುಸ್ಲಿಂ ಜಮಾಅತ್ ಕಛೇರಿಯಲ್ಲಿ ನಡೆಯಿತು.

ಮೂಸಾ ಮದನಿ ಇರ್ದೆಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಮಾಜಿ ಅಧ್ಯಕ್ಷರೂ, ಎಸ್.ಜೆ.ಎಂ ಸಾರಥಿಯೂ ಆದ ಆದಂ ಮದನಿ ಆತೂರುರವರು ವಹಿಸಿದ್ದರು.
ಶೆರೀಫ್ ಮದನಿ ಮಾಡನ್ನೂರುರವರ ಖಿರಾಅತ್ ನೊಂದಿಗೆ ಅಧಿಕೃತವಾಗಿ ಚಾಲನೆಗೊಂಡ ಸಭೆಯನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ಔಪಚಾರಿಕವಾಗಿ ಉದ್ಘಾಟಿಸಿದರು.

ಅಧ್ಯಕ್ಷ ಭಾಷಣದ ಬಳಿಕ ಹಿರಿಯ ಮದನಿಗಳಾದ ಮುಹಮ್ಮದ್ ಮದನಿ ತಿಂಗಳಾಡಿ,ಫಾರೂಖ್ ಮದನಿ ಸಂಪ್ಯ ಹಾಗೂ ಅಬ್ದುರ್ರಹ್ಮಾನ್ ಮದನಿ ಇರ್ದೆ ಆಶಂಸಾ ಭಾಷಣ ಮಾಡಿದರು.

ರಿಟೈನರಿಂಗ್ ಆಫೀಸರುಗಳಾಗಿ ಆಗಮಿಸಿದ ಅಬೂಬಕರ್ ಮದನಿ ಮುದುಂಗಾರುಕಟ್ಟೆ ಹಾಗೂ ಶಾಫಿ ಮದನಿ ಹರೇಕಳ ಸಭೆಗೆ ಶುಭಾಶಯ ಕೋರಿ ಹಿತವಚನ ನೀಡಿದರು.

ಹಾಲಿ ಸಭೆಯನ್ನು ಭರ್ಕಾಸ್ತುಗೊಳಿಸಿದ ಬಳಿಕ ಶಾಫಿ ಮದನಿ ಹರೇಕಲರವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಟಿ.ಕೆ.ಇಬ್ರಾಹಿಮ್ ಮದನಿ ಪನ್ಯರವರನ್ನು ಅವಿರೋಧವಾಗಿ ಆರಿಸಲಾಯಿತು.
ಉಪಾಧ್ಯಕ್ಷರುಗಳಾಗಿ ಫಾರೂಖ್ ಮದನಿ ಸಂಪ್ಯ ಹಾಗೂ ಅಬ್ದುಲ್ ಖಾದರ್ ಮದನಿ ಸುಳ್ಯರವನ್ನೂ ಆರಿಸಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಮದನಿ ಕೆಮ್ಮಾರ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಗಳಾಗಿ ಅಬ್ದುರ್ರಝಾಖ್ ಮದನಿ ಕಬಕ ಹಾಗೂ ಹಮೀದ್ ಮದನಿ ತಿಂಗಳಾಡಿರವರನ್ನೂ ಆರಿಸಲಾಯಿತು.

ಕೋಶಾಧಿಕಾರಿಯಾಗಿ ಮುಹಮ್ಮದ್ ಮದನಿ ಈಶ್ವರಮಂಗಳರವರನ್ನೂ ಆಯ್ಕೆ ಮಾಡಲಾಯಿತು.
ಇಪ್ಪತ್ತು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.

ಸಭೆಯ ಪ್ರಾರಂಭದಲ್ಲಿ ದ.ಕ ಈಸ್ಟ್ ವಿಭಾಗದ ಪ್ರ:ಕಾರ್ಯದರ್ಶಿ ಶಾಫಿ ಮದನಿ ಮಾಡಾವು ಸ್ವಾಗತ ಮಾಡಿದರೆ ಕೊನೆಯಲ್ಲಿ ಹಾಲಿ ತಾಲೂಕು ಮದನೀಸ್ ಪ್ರಧಾನ ಕಾರ್ಯದರ್ಶಿ ಹೈದರ್ ಮದನಿ ಕೆಮ್ಮಾರ ವಂದಿಸಿದರು.

ವರದಿ
ಅಬೂ ಶಹೀರ್ ಮದನಿ

error: Content is protected !! Not allowed copy content from janadhvani.com