ಮದನೀಸ್ ಅಸೋಸಿಯೇಷನ್ ದ.ಕ.ಈಸ್ಟ್ ವಿಭಾಗದ ಮಹಾಸಭೆ ತಾರೀಖು 01-02-2021ನೇ ಸೋಮವಾರದಂದು ಬೆಳಗ್ಗೆ 10:30 ಕ್ಕೆ ಪುತ್ತೂರು ಮುಸ್ಲಿಂ ಜಮಾಅತ್ ಕಛೇರಿಯಲ್ಲಿ ನಡೆಯಿತು.
ಹಾಲಿ ಅಧ್ಯಕ್ಷ ಕೆ.ವೈ.ಹಂಝ ಮದನಿ ಗುರುವಾಯನಕೆರೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ಔಪಚಾರಿಕವಾಗಿ ಉದ್ಘಾಟಿಸಿದರು.ಸಮಿತಿಯ ಕಾರ್ಯದರ್ಶಿ ಶಾಫಿ ಮದನಿ ಮಾಡಾವು ಸ್ವಾಗತಿಸಿ, ವರದಿ ವಾಚಿಸಿದರು.ಹಕೀಂ ಮದನಿ ಈಶ್ವರಮಂಗಳ ಲೆಕ್ಕ ಪತ್ರ ಮಂಡಿಸಿದರು.
ಹಿರಿಯ ನಾಯಕರಲ್ಲೋರ್ವರಾದ ಪಿ.ಕೆ.ಮುಹಮ್ಮದ್ ಮದನಿ ಉರುವಾಲುಪದವು ಆಶಂಸಾ ಭಾಷಣ ನಡೆಸಿದರು.
ಬಳಿಕ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ವಿಷಯ ಮಂಡಣೆ ನಡೆಸಿದರು.ತದನಂತರ 2021-2023 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅದ್ಯಕ್ಷ ರಾಗಿ ಮಹಮ್ಮದ್ ಶರೀಪ್ ಮದನಿ ಪುಂಜಾಲಕಟ್ಟೆ, ಉಪಾಧ್ಯಕ್ಷರಾಗಿ ಹಕೀಂ ಮದನಿ ಈಶ್ವರ ಮಂಗಿಲ, ಅಬ್ದುಸ್ಸಲಾಮ್ ಮದನಿ ಉರುವಾಲುಪದವು ಹಾಗೂ ಹನೀಪ್ ಮದನಿ ಮಂಡೆಕೋಲ್ ಆಯ್ಕೆಯಾದರು.
ಪ್ರದಾನ ಕಾರ್ಯದರ್ಶಿಯಾಗಿ ಅದಂ ಮದನಿ ಅತೂರು.ಜೊತೆ ಕಾರ್ಯದರ್ಶಿಗಳಾಗಿ ಅಬ್ದು ರ್ರಝಾಖ್ ಮದನಿ ಕಬಕ, ಇಸ್ಮಾಯಿಲ್ ಮದನಿ ಕೊಯ್ಯೂರು, ಸಿದ್ದೀಖ್ ಮದನಿ ಕುದ್ರಡ್ಕ ರವರನ್ನು ಆರಿಸಲಾಯಿತು.ಕೋಶಾದಿಕಾರಿಯಾಗಿ ಶಾಫಿ ಮದನಿ ಮಾಡಾವು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಅಬ್ಬಾಸ್ ಮದನಿ ಬಂಡಾಡಿ, KY ಹಂಝ ಮದನಿ ಗುರುವಾಯನಕೆರೆ, ಹನೀಫ್ ಮದನಿ ಪರ್ಲಡ್ಕ, P K ಮುಹಮ್ಮದ್ ಮದನಿ ಅಳಕೆ, P S ಇಬ್ರಾಹೀಮ್ ಮದನಿ ತುರ್ಕಳಿಕೆ, ಬಶೀರ್ ಮದನಿ ಜೋಗಿಬೆಟ್ಟು, ಇಬ್ರಾಹಿಮ್ ಮದನಿ ಕಬಕ, ನಝೀರ್ ಮದನಿ ಪೂಂಜಲಕಟ್ಟೆ, ಬಶೀರ್ ಮದನಿ ಕಳಂಜಿಬೈಲ್, ಹೈದರ್ ಮದನಿ ಕೆಮ್ಮಾರ, S M ಅಬ್ದುರ್ರಹ್ಮಾನ್ ಮದನಿ ನಾಳ, ಬೆನಪು ಅಬೂಬಕರ್ ಮದನಿ, ಫಾರೂಖ್ ಮದನಿ ಸಂಪ್ಯ, ಶರೀಫ್ ಮದನಿ ಕರ್ಪಾಡಿ, T K ಇಬ್ರಾಹಿಮ್ ಮದನಿ ಕಡಬ, ಮುಹಮ್ಮದ್ ಮದನಿ ರೆಂಜ, ಆಸಿಫ್ ಮದನಿ ತುರ್ಕಳಿಕೆ, ಅಬ್ದುಲ್ ಖಾದರ್ ಮದನಿ ಪಳ್ಳಿತ್ತಡ್ಕ ರವರನ್ನೂ ಆರಿಸಲಾಯಿತು.ಕೊನೆಯಲ್ಲಿ
ನೂತನ ಕಾರ್ಯದರ್ಶಿ ಆದಂ ಮದನಿ ಆತೂರು ವಂಧಿಸಿದರು.