janadhvani

Kannada Online News Paper

ಸವಣೂರು: ರೈತರನ್ನು ಬೆಂಬಲಿಸಿ, ಕೃಷಿ ತೋಟದಲ್ಲಿ ಗಣರಾಜ್ಯೋತ್ಸವ ಆಚರಣೆ

ಕೇಂದ್ರ ಸರಕಾರವು ಇತ್ತೀಚೆಗೆ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ ಮಸೂದೆಗಳ ರದ್ದತಿಗಾಗಿ ಕಳೆದ 50 ದಿನಗಳಿಂದಲೂ ಹೆಚ್ಚು ದಿಲ್ಲಿಯ ಬೀದಿ ಬೀದಿಗಳಲ್ಲಿ ಲಕ್ಷಾಂತರ ಮಂದಿ ಈ ದೇಶದ ಅನ್ನದಾತರು ಧರಣಿ ನಡೆಸುತ್ತಿದ್ದಾರೆ.

100 ಕ್ಕಿಂತಲೂ ಹೆಚ್ಚಿನ ರೈತರು ಸಾವನ್ನಪ್ಪಿದ್ದಾರೆ.
ಇಷ್ಟಾದರೂ ಕೇಂದ್ರ ಸರಕಾರಕ್ಕೆ ಕಿವಿ ಕೇಳಿಸಲಿಲ್ಲ. ಕಣ್ಣು ಕುರುಡಾಗಿದೆ.ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಗಣರಾಜ್ಯ ದಿನವಾದ ಜನವರಿ 26 ರಂದು ದಿಲ್ಲಿಯಲ್ಲಿ ಟ್ರ್ಯಾಕ್ಟರ್ ಫೆರೇಡ್ ನಡೆಸಲಾಗಿದೆ. ಅದಕ್ಕೆ ಬೆಂಬಲವಾಗಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಟ್ರ್ಯಾಕ್ಟರ್ ಫೆರೇಡ್ ಗಳು ನಡೆದಿದೆ.

ಆ ಪ್ರಯುಕ್ತ, ರೈತರಿಗೆ ಬೆಂಬಲವಾಗಿ, ನೈತಿಕ‌ ಸ್ಥೈರ್ಯ ತುಂಬು ನಿಟ್ಟಿನಲ್ಲಿ ಸವಣೂರು ಶಾಖಾ SSF ಇದರ ಆಶ್ರಯದಲ್ಲಿ ಕೃಷಿ ತೋಟದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದರ ಮೂಲಕ ಗಣರಾಜೋತ್ಸವವನ್ನು ಆಚರಿಸಲಾಯಿತ್ತು. ಅಬ್ದುರಹ್ಮಾನ್ ಸೊಂಪಾಡಿ ದ್ವಜಾರೋಹಣ ಮಾಡಿದರು.

SYS ಸವಣೂರು ಸೆಂಟರ್ ಅಧ್ಯಕ್ಷರಾದ ಅಶ್ರಫ್ ಸಖಾಫಿ ಸವಣೂರು ಮುಖ್ಯ ಭಾಷಣ ಮಾಡಿದರು. ಹನೀಫ್ ಸಅದಿ ಉದ್ಘಾಟಿಸಿದರು. ಯಸ್ಸೀಯೆ ಸವಣೂರು ಅಧ್ಯಕ್ಷತೆ ವಹಿಸಿದರು.ಇಸ್ಮಾಯೀಲ್ ಹಾಜಿ ಕೇಕುಡೆ, ಉಮರ್ ಸೊಂಪಾಡಿ, ಇಸ್ಮಾಯೀಲ್ ಸೊಂಪಾಡಿ, ಫೈಸಲ್ ಶಾಂತಿನಗರ, ಉಮರ್ ಮುಸ್ಲಿಯಾರ್ ಗುಂಡಿಲ ಖಾದರ್ ಆಲಂಪಾಡಿ, ಹಂಝ ಸೊಂಪಾಡಿ ,ಮುಂತಾದವರು ಭಾಗವಹಿಸಿದರು.

error: Content is protected !! Not allowed copy content from janadhvani.com