ಚಿತ್ರದುರ್ಗ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಚಿತ್ರದುರ್ಗ ವತಿಯಿಂದ ಸಿಬಾರ ಹಳ್ಳಿಯ ಕೃಷಿ ಭೂಮಿಯಲ್ಲಿ ಇಂದು ಗಣರಾಜ್ಯೋತ್ಸವ ಆಚರಿಸಲಾಯಿತು.
ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲಾ ಸದಸ್ಯರಾದ ಹಾಫಿಝ್ ಆದಂ ಹಝ್ರತ್ ಅಧ್ಯಕ್ಷತೆ ವಹಿಸಿದರು. ಚಿತ್ರದುರ್ಗ ಜಿಲ್ಲಾ SSF ನಿಕಟಪೂರ್ವ ಅಧ್ಯಕ್ಷ ಎಮ್ಮೆಸ್ಸೆಂ ಜುನೈದ್ ಸಖಾಫಿ ಭಾವೈಕ್ಯತಾ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಖಾದಿರ್ ಸಖಾಫಿ, ಜಿಲ್ಲಾ ಕೊಶಾಧಿಕಾರಿ ಸಯ್ಯದ್ ಸಾದಿಕ್, ಜಿಲ್ಲಾ ಸದಸ್ಯರಾದ ಝಕರಿಯಾ ಸಖಾಫಿ, ಫಝಲುಲ್ಲಾ ಹಾಗೂ ಹಾಸನ ಜಿಲ್ಲಾಎಸ್ಸೆಸ್ಸೆಫ್ ನಾಯಕರಾದ ಅನ್ವರ್ ಅಸದಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ರೈತ ಚಳುವಳಿಯನ್ನು ಬೆಂಬಲಿಸುತ್ತಾ ಎಸ್ಸೆಸ್ಸೆಫ್ ಈ ಬಾರಿ ರಾಷ್ಟ್ರದಾದ್ಯಂತ ಕೃಷಿ ಭೂಮಿಯಲ್ಲಿ ಗಣರಾಜ್ಯೋತ್ಸವ ಆಚರಿಸಲು ಕರೆ ನೀಡಿದೆ.