ಮಂಗಳೂರು, ಜ. 26: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರಾಕ್ಟರ್ ರ‍್ಯಾಲಿಯನ್ನು ಬೆಂಬಲಿಸಿ ಇಂದು ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತ ಆಯೋಜನೆಯಲ್ಲಿ ರೈತ ಪರ ಪ್ರತಿಭಟನೆ ಮತ್ತು ರ‍್ಯಾಲಿ ನಡೆಯಿತು.
ದ.ಕ.ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ವಿವಿಧ ಪ್ರಜಾ ಪ್ರಭುತ್ವವಾದಿ ಸಂಘಟನೆಗಳ ಸದಸ್ಯರು, ಸಾರ್ವಜನಿಕರು, ಮಹಿಳೆಯರು, ಕಾರ್ಯಕರ್ತರು ಇಂದು ಅಪರಾಹ್ನ ರೈತ ಪರ ಘೋಷಣೆಗಳನ್ನು ಕೂಗಿ ರೈತ ಪರ ತಮ್ಮ ಬೆಂಬಲ ಸೂಚಿಸಿದರು.
ರೈತ ವಿರೋಧಿ ಮೂರು ಕರಾಳ ಶಾಸನಗಳ ಮಾರಕ ಪರಿಣಾಮ ಬಗ್ಗೆ ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಕಿರು ಪ್ರಾಥಮಿಕ ಭಾಷಣ ನಡೆಸಿದರು. ನಂತರ, ರ‍್ಯಾಲಿಯು ದ.ಕ. ಜಿಲ್ಲಾಧಿಕಾರಿ ಕಚೇರಿಯಿಂದ, ರಾವ್ ಅಂಡ್ ರಾವ್ ವೃತ್ತದ ಮೂಲಕ ಸಾಗಿ ಮಿನಿ ವಿಧಾನ ಸೌಧ ಬಳಿ,ವಿಸ್ತೃತ ಪ್ರತಿಭಟನೆಗೆ ಸಾಗಿದೆ. ರ‍್ಯಾಲಿಯಲ್ಲಿ ಭಾರತದ ದ್ವಜಗಳು, ರೈತ ಪರ ಭಿತ್ತಿ ಪತ್ರ ಗಳು, ಡಾ ಬೀ.ಆರ್.ಅಂಬೇಡ್ಕರ್ ರವರ ಫೋಟೋ ಪ್ರದರ್ಶಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಸುಮೊಟೊ ದುರ್ಬಳಕೆ ಮತ್ತು ಪಕ್ಷ ಪಾತೀಯ ನಿಲುವನ್ನು ಖಂಡಿಸಿ KMJ SYS SSF ಸಮಿತಿ ವತಿಯಿಂದ ಕಮಿಷನರ್ ಭೇಟಿ ಮಾಡಿ ಮನವಿ
ಸಾರ್ವಜನಿಕ ಸ್ಥಳದಲ್ಲಿ ನಮಾಝ್: ಘಟನೆಯಲ್ಲಿ ಕೇಸ್ ದಾಖಲಿಸಿದ್ದು ಅಚ್ಚರಿ ಮೂಡಿಸಿದೆ- ಶಾಫಿ ಸಅದಿ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮುಖ್ಯಮಂತ್ರಿಯನ್ನು ಭೇಟಿಮಾಡಿ ವಿವಿಧ ಭೇಡಿಕೆಗಳನ್ನಿಟ್ಟ ಸುನ್ನೀ ಸಂಘಟನಾ ನಾಯಕರು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಾನಕ್ಕಾಡ್ ಹೈದರಾಲಿ ತಂಙ್ಞಳ್ ನಿಧನ- ಕೆ.ಅಶ್ರಫ್ ಮುಸ್ಲಿಮ್ ಒಕ್ಕೂಟ ಸಂತಾಪ
SDPI ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯಿಂದ ಗಣರಾಜ್ಯೋತ್ಸವ ದಿನಾಚರಣೆ
ವಿವಾಹ ಸಂದರ್ಭ ವರನಿಂದ ಮಾರು ವೇಷ: ಧಾರ್ಮಿಕ ನಂಬಿಕೆಗೆ ಅವಹೇಳನ- ಮುಸ್ಲಿಮ್ ಒಕ್ಕೂಟ ಖಂಡನೆ
ಕಾಣಿಕೆ ಡಬ್ಬಿಗಳನ್ನು ಅಪವಿತ್ರಗೊಳಿಸುತ್ತಿದ್ದ ದೇವದಾಸ್ ದೇಸಾಯಿ ಬಂಧನ