ಮಂಗಳೂರು:ಇಲ್ಲಿನ ನಗರ ಸೇರಿದಂತೆ ನಾನಾ ಕಡೆ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಹಾಗೂ ಇನ್ನಿತರ ಸೊತ್ತುಗಳು ಕಂಡು ಬಂದಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಮಂಗಳೂರು ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಣಿಕೆ ಡಬ್ಬಿಯಲ್ಲಿಅವಹೇಳನ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಕಮಿಷನರ್ ಅವರನ್ನು ಭೇಟಿಯಾಗಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದೇನೆ. ಈ ರೀತಿಯ ಘಟನೆಗಳ ಮೂಲಕ ತಂಡವೊಂದು ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕಿರುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಟಿ.ಕೆ. ಸುಧೀರ್, ಸುಭೋದಯ ಆಳ್ವ, ಮುರಳೀಧರ್ ರೈ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಸುಮೊಟೊ ದುರ್ಬಳಕೆ ಮತ್ತು ಪಕ್ಷ ಪಾತೀಯ ನಿಲುವನ್ನು ಖಂಡಿಸಿ KMJ SYS SSF ಸಮಿತಿ ವತಿಯಿಂದ ಕಮಿಷನರ್ ಭೇಟಿ ಮಾಡಿ ಮನವಿ
ಸಾರ್ವಜನಿಕ ಸ್ಥಳದಲ್ಲಿ ನಮಾಝ್: ಘಟನೆಯಲ್ಲಿ ಕೇಸ್ ದಾಖಲಿಸಿದ್ದು ಅಚ್ಚರಿ ಮೂಡಿಸಿದೆ- ಶಾಫಿ ಸಅದಿ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮುಖ್ಯಮಂತ್ರಿಯನ್ನು ಭೇಟಿಮಾಡಿ ವಿವಿಧ ಭೇಡಿಕೆಗಳನ್ನಿಟ್ಟ ಸುನ್ನೀ ಸಂಘಟನಾ ನಾಯಕರು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಾನಕ್ಕಾಡ್ ಹೈದರಾಲಿ ತಂಙ್ಞಳ್ ನಿಧನ- ಕೆ.ಅಶ್ರಫ್ ಮುಸ್ಲಿಮ್ ಒಕ್ಕೂಟ ಸಂತಾಪ
SDPI ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯಿಂದ ಗಣರಾಜ್ಯೋತ್ಸವ ದಿನಾಚರಣೆ
ವಿವಾಹ ಸಂದರ್ಭ ವರನಿಂದ ಮಾರು ವೇಷ: ಧಾರ್ಮಿಕ ನಂಬಿಕೆಗೆ ಅವಹೇಳನ- ಮುಸ್ಲಿಮ್ ಒಕ್ಕೂಟ ಖಂಡನೆ
ಕಾಣಿಕೆ ಡಬ್ಬಿಗಳನ್ನು ಅಪವಿತ್ರಗೊಳಿಸುತ್ತಿದ್ದ ದೇವದಾಸ್ ದೇಸಾಯಿ ಬಂಧನ