janadhvani

Kannada Online News Paper

DK ಪ್ರೀಮಿಯರ್ ಲೀಗ್ ಸೀಸನ್ 3 ಟೀಮ್-RDX ಪಡೆಗೆ ಚಾಂಪಿಯನ್ ಪಟ್ಟ

ಡಿ.ಕೆ ಪ್ರೀಮಿಯರ್ ಲೀಗ್ ಕೊಡಂಗಾಯಿ ಇದರ ವತಿಯಿಂದ 3’ನೇ ಆವೃತ್ತಿಯ ಲೀಗ್ ಕ್ರಿಕೆಟ್ ಪಂದ್ಯಾಕೂಟವು ಎಮ್.ಎಸ್ ಕ್ರೀಡಾಂಗಣ’ದಲ್ಲಿ ರವಿವಾರ ನಡೆಯಿತು.

ಪಂದ್ಯಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ನೂತನ ಸದಸ್ಯರಾದ ಸನ್ಮಾನ್ಯ ಶ್ರೀ ಸಂದೇಶ್ ಶೆಟ್ಟಿ ಬಿ ಇವರು ನೆರವೇರಿಸಿದರು.ಕ್ಲಬ್ ವತಿಯಿಂದ ವಿಟ್ಲ ಪಡ್ನೂರು 7’ನೇ ವಾರ್ಡ್’ನಿಂದ ಆಯ್ಕೆಯಾದ ಸಂದೇಶ್ ಶೆಟ್ಟಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಮುಂದೆ ಸಾಗಿದ ಆಯ್ದು 5 ತಂಡಗಳ ಲೀಗ್ ಕ್ರಿಕೆಟ್ ಪಂದ್ಯಾಕೂಟದ ಪ್ರತಿ ಪಂದ್ಯವು ಬಹಳ ಪೈಪೋಟಿಯಿಂದ ಸಾಗಿ ಪ್ರಶಸ್ತಿ ಸುತ್ತಿನ ಕಡೆ ಹಾರಿಸ್ ಮಾಲಕತ್ವ ಟೀಮ್ RDX ಮತ್ತು ಅಝರ್ ಅರಫಾ ಮಾಲಕತ್ವದ ಮನ್ಹ ವಾರಿಯರ್ಸ್ ತಂಡವು ಮುಖ ಮಾಡಿತು, ಟೀಮ್ RDX ಐಕಾನ್ ಆಟಗಾರ ಮುಝಮ್ಮಿಲ್(ಜಂಬಿ)ಇವರ ಆಲ್’ರೌಂಡರ್ ಪ್ರದರ್ಶನದಿಂದ ಮನ್ಹ ವಾರಿಯರ್ಸ್ ತಂಡವು ಶರಣಾಗಿ ರನ್ನರ್ಸ್ ಪಟ್ಟಕ್ಕೆ ತೃಪಿಪಟ್ಟು, ಡಿ.ಕೆ ಪ್ರೀಮಿಯರ್ ಲೀಗ್ ಮೂರನೇ ಅವೃತ್ತಿಯ ಚಾಂಪಿಯನ್ ಆಗಿ ಟೀಮ್ RDX ಪಡೆಯು ಕೇಕೆ ಹಾಕಿತು, ಉತ್ತಮ ದಾಂಡಿಗ, ಉತ್ತಮ ದಾಳಿಗಾರ ಪ್ರಶಸ್ತಿಯು ಸಾದಿಕ್ ಮತ್ತು ರಾಝಿಕ್ ಪಾಲಾದರೆ , ಸವ್ಯಸಾಚಿ ಆಟಗಾರನಾಗಿ ಮುಝಮ್ಮಿಲ್ ಹೊರಹೊಮ್ಮಿದರು.

ವರದಿ:- ಶರೀಫ್ ಮೇಲಂಗಡಿ

error: Content is protected !! Not allowed copy content from janadhvani.com