janadhvani

Kannada Online News Paper

ನೈಟ್ ಕರ್ಫ್ಯೂ: ಜಾತಿ, ಧರ್ಮದ ಬಣ್ಣ ನೀಡಬೇಡಿ- ನಳಿನ್ ಕುಮಾರ್

WHO ಪ್ರಕಾರ ಅತೀ ಹೆಚ್ಚು ದೇಶಗಳಲ್ಲಿ ಲಾಕ್ ಡೌನ್ ಮಾಡಬೇಕಾದ ಸ್ಥಿತಿಯಿದೆ. ಅಲ್ಲಿಯೂ ಕ್ರಿಸ್ಮಸ್ ಆಚರಣೆಗೆ ತೊಂದರೆಯಾಗಿದೆ

ಮಂಗಳೂರು, ಡಿ.24- ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ವಿಚಾರವನ್ನು ಜಾತಿ, ಧರ್ಮದ ಬಣ್ಣದಲ್ಲಿ ನೋಡಬಾರದು. ಯಾವುದೇ ಜಾತಿ, ಮತ, ಧರ್ಮಗಳು ರೋಗಕ್ಕಿಲ್ಲ. ಆದರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ದ.ಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರೋಗಾಣು ಎಲ್ಲರಿಗೂ ಬರುತ್ತದೆ. ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಪ್ರತಿಯೊಬ್ಬರ ಪ್ರಾಣ ಮುಖ್ಯವಾಗಿದೆ. WHO ಮಾರ್ಗಸೂಚಿ ಪ್ರಕಾರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು. ಇನ್ನು WHO ಪ್ರಕಾರ ಅತೀ ಹೆಚ್ಚು ದೇಶಗಳಲ್ಲಿ ಲಾಕ್ ಡೌನ್ ಮಾಡಬೇಕಾದ ಸ್ಥಿತಿಯಿದೆ. ಅಲ್ಲಿಯೂ ಕ್ರಿಸ್ಮಸ್ ಆಚರಣೆಗೆ ತೊಂದರೆಯಾಗಿದೆ. ರಾಜ್ಯದ ಜನರ ಜೀವದ ಬಗ್ಗೆ ಕಾಳಜಿ ವಹಿಸಿ ಸರ್ಕಾರ ಈ ನಿರ್ಧಾರ ಮಾಡಿದೆ ಎಂದರು.

error: Content is protected !! Not allowed copy content from janadhvani.com