janadhvani

Kannada Online News Paper

ಪಿಎಫ್ಐ ಮಾಜಿ ಅಧ್ಯಕ್ಷ ಕೆ.ಎಂ.ಶರೀಫ್ ನಿಧನ- ಮುಸ್ಲಿಮ್ ಲೀಗ್ ಸಂತಾಪ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್ ಅವರು ಡಿ.22ರಂದು ನಿಧನರಾದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಮಿತ್ತಬೈಲ್‌ನ ಶರೀಫ್ ಅವರು ಕೆಎಫ್‌ಡಿ ಸ್ಥಾಪನೆ ಕಾಲದಲ್ಲಿ ಶ್ರಮಿಸಿದ್ದು, ಬಳಿಕ ಕೆಎಫ್‌ಡಿ, ಪಿಎಫ್ಐ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ವರದಕ್ಷಿಣೆ ವಿರುದ್ಧ ಹೋರಾಟ, ಮಕ್ಕಳ ಶೈಕ್ಷಣಿಕ ನೆರವು, ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಖ್ಯಾತ ಧಾರ್ಮಿಕ ವಿದ್ವಾಂಸ ದಿವಂಗತ ಮಿತ್ತಬೈಲ್ ಅಬ್ದುಲ್ ಹಾಜಿ ಮತ್ತು ನಫೀಸಾ ದಂಪತಿಯ ಪುತ್ರರಾದ ಕೆ.ಎಂ.ಶರೀಫ್ 1964ಸೆ. 1 ರಂದು ಜನಿಸಿದ್ದರು.

ಕೈಕಂಬ ಮುಹಮ್ಮದ್ ಶರೀಪ್ ಆದ ಅವರು ಊರಿನಲ್ಲಿ ‘ಮುಹಮ್ಮದ್’ ಎಂದೇ ಪರಿಚಿತರಾಗಿದ್ದರು. ಬಾಲ್ಯದಲ್ಲಿಯೇ ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಸಮಸ್ತ ಕೇರಳದ ಆಧೀನ ಸಂಘಟನೆಯಲ್ಕಿ ತನ್ನನ್ನು ತೊಡಗಿಸಿಕೊಂಡಿದ್ದರು. ಬಿಎಸ್ ಸಿ ಪದವೀಧರ ಆಗಿರುವ ಅವರು ಖ್ಯಾತ ಧಾರ್ಮಿಕ ವಿದ್ವಾಂಸ ದಿ.ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಶಿಷ್ಯರಾಗಿ ಧಾರ್ಮಿಕ ವಿದ್ಯಾಭ್ಯಾಸ ಪಡೆದಿದ್ದರು.

ಮುಸ್ಲಿಂ ಲೀಗ್ ಸಂತಾಪ

ಪ್ರತಿಷ್ಟಿತ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ ಮನೆತನದ ಕುಡಿ,ಮಿತ್ತಬೈಲಿನ ದೀರ್ಘ ಕಾಲದ ಖತೀಬ್ ಆಗಿ ಸೇವೆಗೈದ ಮರ್ಹೂಂ ಅಬ್ದುಲ್ಲ ಹಾಜಿಯವರ ಮಗ ,ಪೂರ್ವ ಕಾಲದಲ್ಲಿ ಸಮಸ್ತದ ಕಾರ್ಯಕರ್ತರಾಗಿ ಮುಸ್ಲಿಂ ಲೀಗ್ ಇದರ ವಿದ್ಯಾರ್ಥಿ ಸಂಘಟನೆಯಾದ ಎಮ್. ಎಸ್. ಎಫ್. ನಿಂದ ರಾಜಕೀಯ ಪ್ರವೇಶಿಸಿದ ,ಶರೀಫ್ ರವರು ಉತ್ತಮ ವಾಗ್ಮಿ ಹಾಗೂ ಬರಹಗಾರರಾಗಿದ್ದರು.

ಉತ್ತಮ ಹೋರಾಟಗಾರರಾಗಿದ್ದ ಕೆ. ಎಮ್. ಶರೀಫ್ ರವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮುಸ್ಲಿಂ ಲೀಗ್ ಜಿಲ್ಲಾ ಸಮಿತಿಯು ತೀವ್ರ ಸಂತಾಪ ಸೂಚಿಸುದರೊಂದಿಗೆ ಅವರ ಬರ್ಝಖೀ ಜೀವನವು ಅಲ್ಲಾಹನು ಸ್ವರ್ಗೀಯ ತಾಣವಾಗಿಸಿ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ವರ್ಗದವರಿಗೂ ಅವರ ಅಭಿಮಾನಿಗಳಿಗೂ ಇವರ ಅಗಲಿಕೆಯಿಂದ ಉಂಟಾದ ದುಖಃವನ್ನು ಸಹಿಸಲು ಸಹನೆಯನ್ನು ಅಲ್ಲಾಹು ದಯಪಾಲಿಸಲಿ.

ಅಬ್ದುಲ್ ರಹ್ಮಾನ್ ದಾರಿಮಿ, ಕಿನ್ಯಾ (ಅಧ್ಯಕ್ಷರು ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ)

error: Content is protected !! Not allowed copy content from janadhvani.com