janadhvani

Kannada Online News Paper

ಎಂಟು ತಿಂಗಳುಗಳ ಬಳಿಕ ಇಂದು ಕರ್ನಾಟಕ ರಾಜ್ಯದಲ್ಲಿ ಕಾಲೇಜುಗಳು ಭಾಗಶಃವಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರನರಾರಂಭಗೊಂಡಿದೆ.

ಕಾಲೇಜಿಗೆ ಹಾಜರಾಗಲು ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳಿಗೆ ಕೋವಿಡ್ ನೆಗಟೀವ್ ರಿಪೋರ್ಟ್ ಕಡ್ಡಾಯವಾಗಿದೆ.

ರಿಪೋರ್ಟ್ ಸಿಗದ ಕಾರಣ ಬಹುತೇಕ ವಿಧ್ಯಾರ್ಥಿಗಳಿಗೆ ಇಂದು ಹಾಜರಾಗಲು ಸಾಧ್ಯವಾಗಲಿಲ್ಲ. ಇಂದಿನ ಹಾಜರಾತಿಯಂತೆ ಕೇವಲ 10 ರಿಂದ 20 ಶೇಕಡಾ ವಿಧ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ ಎಂದು ಕರ್ನಾಟಕ ಸರಕಾರಿ ಕಾಲೇಜ್ ಅಧ್ಯಾಪಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ವಿಧ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ, ಹಾಜರಾಗಲು ಬಯಸುವ ವಿಧ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರವನ್ನು ಪಡೆಯಬೇಕಾಗಿದೆ. ತರಗತಿಗೆ ಹಾಜರಾಗಲು ಬಯಸದ ವಿಧ್ಯಾರ್ಥಿಗಳು ಆನ್‌ಲೈನ್ ತರಗತಿಗೆ ಹಾಜರಾಗುವಂತೆ ಸರಕಾರ ತಿಳಿಸಿರುತ್ತದೆ.

error: Content is protected !! Not allowed copy content from janadhvani.com