janadhvani

Kannada Online News Paper

ಎಸ್ಸೆಸ್ಸೆಫ್ ಬ್ಲಡ್ ಸೈಬೋ ಪ್ರಚಾರಾರ್ಥ ಗುರುಪುರ ಕೈಕಂಬದಲ್ಲಿ ಚಹಾಕೂಟ

ಗುರುಪುರ: ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಬ್ಲಡ್ ಸೈಬೋ ಇದರ 200ನೇ ಬ್ಲಡ್ ಕ್ಯಾಂಪ್ ನ ಪ್ರಚಾರದ ಭಾಗವಾಗಿ ಕೈಕಂಬ ಸೆಕ್ಟರ್ ವತಿಯಿಂದ ಗುರುಪುರ ಕೈಕಂಬದಲ್ಲಿ ಚಹಾ ಕೂಟ ಹಮ್ಮಿಕೊಳ್ಳಲಾಯಿತು.

ಸೈಯ್ಯಿದ್ ನಿಝಾಮುದ್ದೀನ್ ಬಾಫಕಿ ತಂಙಳ್ ಉದ್ಘಾಟಿಸಿ,‌ಆಶಿರ್ವದಿಸಿದರು. ಈ ವೇಳೆ ಎಸ್ ವೈಎಸ್ ಕೈಕಂಬ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ, ಗಂಜಿಮಠ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಝಾಕಿರ್ ಹುಸೈನ್ ಸೂರಲ್ಪಾಡಿ, ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷರಾದ ರಿಯಾಝ್ ಸಅದಿ ಹಾಗೂ ಇತರರು ಉಪಸ್ಥಿತರಿದ್ದರು.

ಇದೇ ವೇಳೆ 200ನೇ ಬ್ಲಡ್ ಕ್ಯಾಂಪ್ ನ ಕರಪತ್ರಗಳನ್ನು ಪರಿಸರದ ಎಲ್ಲಾ ಸಾರ್ವಜನಿಕರು ಹಾಗೂ ಅಂಗಡಿಗಳಿಗೆ ವಿತರಿಸಲಾಯಿತು.

error: Content is protected !! Not allowed copy content from janadhvani.com