janadhvani

Kannada Online News Paper

ಚಿಕ್ಕಮಗಳೂರು ಜಿಲ್ಲಾದ್ಯಂತ ಕರ್ನಾಟಕ ಮುಸ್ಲಿಂ ಜಮಾಅತ್ ರಚನಾ ಸಮಾವೇಶ

ಚಿಕ್ಕಮಗಳೂರು :ನವೆಂಬರ್ 3 ರಂದು ನಗರದ ಸಹರಾ ಶಾದಿ ಮಹಲ್ ನಲ್ಲಿ ಚಿಕ್ಕಮಗಳೂರು ಜಿಲ್ಲಾದ್ಯಂತ ತಾಲ್ಲೂಕುವಾರು,ಹೋಬಳಿ,ಗ್ರಾಮ, ಮತ್ತು ಭೂತ್ ಮಟ್ಟದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಸಮಿತಿ ರಚನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ಯವರು ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ KMJ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೌಲಾನಾ ಶಾಫಿ ಸಅದಿ ರವರು ಸಮಿತಿಗಳನ್ನು ರಚಿಸಲು ಹಸಿರು ನಿಶಾನೆ ತೋರಿಸುವ ಮೂಲಕ ಸಂಪೂರ್ಣ ವಿವರಣೆಯನ್ನು ನೀಡಿದರು.

ಹಾಗು ರಾಜ್ಯ ಸಮಿತಿಯ ಉಪಾಧ್ಯಕ್ಷ ರಾದ ಮೌಲಾನ ಅಬು ಸುಫ್ಯಾನ್ ಮದನಿ ರವರು ಮಾತನಾಡಿ ಜಿಲ್ಲಾದ್ಯಂತ ಪ್ರತಿಯೊಂದು ಸುನ್ನಿ ಸಂಘಟನೆಗಳು ಸಮಿತಿಯ ಏಳಿಗೆಗೆ ಹಾಗು ಬಲಿಷ್ಠಗೊಳಿಸುವಲ್ಲಿ ಜಿಲ್ಲಾ ಸಮಿತಿಯೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಝಾಕಿರ್ ಹುಸೈನ್ ರವರು ಸ್ವಾಗತ ಭಾಷಣ ಮಾಡಿದರು.

ಮೌಲಾನ ಶಬ್ಬೀರ್ ಅಹಮದ್ ಮಿಸ್ಬಾಹಿ, ಮೌಲಾನ ಅಬ್ದುಲ್ ಘನಿ, ಮೌಲಾನ ಮುಫ್ತಿ ಅನ್ವರ್ ಹುಸೈನ್ ಮಿಸ್ಬಾಹಿ ರವರು ಸಮಿತಿಯನ್ನು ಸದೃಢ ಗೊಳಿಸುವಲ್ಲಿ ಉಮರಾ ಉಲೇಮಾ ರವರ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಲ್ ಹಜ್ ಮುಹಮ್ಮದ್ ಶಾಹಿದ್ ರಾಜ್ವಿ ರವರು ಮಾತನಾಡಿ ಇನ್ನು ಹದಿನೈದು ದನಗಳವರೆಗೆ ಎಲ್ಲ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳುವುದಾಗಿ ಘೋಷಣೆ ಮಾಡಿದರು.

ಈ ಸಮಾರಂಭದಲ್ಲಿ ರಾಜ್ಯ ಸಮಿತಿಯ ಸದಸ್ಯರಾದ ಯೂಸುಫ್ ಹಾಜಿ, ನಾಸಿರ್ ಟಿ ಎಂ, ಅಬೂಬಕರ್ ಕೆ ಪಿ ಹಾಗು ಜಿಲ್ಲೆಯಿಂದ ಆಗಮಿಸಿದ್ದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಸೀದಿ ಮುತ್ತವಲ್ಲಿಗಳು ಕರ್ನಾಟಕ ಮುಸ್ಲಿಂ ಜಮಾತ್ ಸದಸ್ಯರು ಮತ್ತು ಕಾರ್ಯಕರ್ತರು ಆಗಮಿಸಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಮುನೀರ್ ಅಹ್ಮದ್ ರವರು ವಂದನಾರ್ಪಣೆಯನ್ನು ಸಲ್ಲಿಸಿದರು ಎಂದು ಸಂಸ್ಥೆಯ ಕಾರ್ಯದರ್ಶಿಯಾದ ಅಲ್ ಹಜ್ ಫೈರೋಜ್ ಅಹಮದ್ ರಜ್ವೀ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com