janadhvani

Kannada Online News Paper

ಅಬುಧಾಬಿ ಗ್ರ್ಯಾಂಡ್ ಮೀಲಾದ್ ಸಮಾವೇಶ- ಅಕ್ಟೋಬರ್ 23ಕ್ಕೆ

ಕೆ.ಸಿ.ಎಫ್ ಅಬುಧಾಬಿ ಝೋನ್ ವತಿಯಿಂದ ಅಕ್ಟೋಬರ್ 23, 2020 ಶುಕ್ರವಾರ ದಂದು ಆನ್ಲೈನ್ ಮೂಲಕ ಗ್ರಾಂಡ್ ಮೀಲಾದ್ ಸಮಾವೇಶ ನಡೆಯಲಿದೆ.

ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಇಬ್ರಾಹಿಂ ಬ್ರೈಟ್ ಮಾರ್ಬಿಲ್ ರವರ ಅದ್ಯಕ್ಷತೆಯಲ್ಲಿ ಐ.ಸಿ.ಎಫ್ ಯು.ಎ.ಇ ಅಧ್ಯಕ್ಷರಾದ ಬಹು ಮುಸ್ತಫಾ ದಾರಿಮಿ ಮೀಲಾದ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಕೆ.ಸಿ.ಎಫ್ ಗ್ರಾಂಡ್ ಮೀಲಾದ್ ಸಮಾವೇಶದಲ್ಲಿ ಖ್ಯಾತ ವಾಗ್ಮಿ ಡಾ|ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣ ನಡೆಸಲಿರುವರು. ಐ.ಎನ್.ಸಿ ಫಿನಾಸ್ಸಿಯಲ್ ಕಂಟ್ರೋಲರ್ ಬಹು|ಅಬ್ದುಲ್ ಹಮೀದ್ ಸಅದಿ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಕೆ.ಸಿ.ಎಫ್ ಅಬುಧಾಬಿ ಬುರ್ದಾ ತಂಡದಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಸಲೀಂ ಖಾದಿರಿ ಉಜಿರೆಯವರ ಖವಾಲಿಯೂ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಐ.ಎನ್.ಸಿ ಅಧ್ಯಕ್ಷರಾದ ಡಾ| ಹಾಜಿ ಶೈಖ್ ಬಾವ ಮಂಗಳೂರು, ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಕೆ.ಸಿ.ಎಫ್ ಯು.ಎ.ಇ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ, ಪ್ರ.ಕಾರ್ಯದರ್ಶಿ ಮೂಸಾ ಹಾಜಿ ಬಸರ, ಕೆ.ಸಿ.ಎಫ್ ಅಬುಧಾಬಿ ಉಸ್ತುವಾರಿ ಹಾಜಿ ಝೈನುದ್ದೀನ್ ಬೆಳ್ಳಾರೆ, ಸ್ವಾಗತ ಸಮಿತಿಯ ಕನ್ವಿನರ್ ಅಬ್ದುಲ್ ಹಕೀಮ್ ತುರ್ಕಳಿಕೆ ಅಶಂಸಾ ಭಾಷಣವನ್ನು ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಝೋನ್ ಅಧ್ಯಕ್ಷರಾದ ಬಹು!ಹಸೈನಾರ್ ಅಮಾನಿ ಅಜ್ಜಾವರ ಸ್ವಾಗತಿಸಿ ಪ್ರ.ಕಾರ್ಯದರ್ಶಿ ಎನ್.ಕೆ ಸಿದ್ದೀಕ್ ಅಳಿಕೆ ದನ್ಯವಾದಗೈಯಲಿರುವರೆಂದು ಮೀಲಾದ್ ಸಮಾವೇಶದ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ :-ಇರ್ಫಾಝ್ ತುಂಬೆ
(ಕೆ.ಸಿ.ಎಫ್ ಅಬುಧಾಬಿ)