janadhvani

Kannada Online News Paper

SMA ಉಡುಪಿ ಜಿಲ್ಲಾ ಅಲರ್ಟ್ 2020: ತಾಜುಲ್ ಫುಕಹಾಅ್ ಅನುಸ್ಮರಣಾ ಸಮಾವೇಶ

ಉಡುಪಿ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಹಾಗೂ SMA ಪಡುಬಿದ್ರೆ ಮತ್ತು ಕುಂದಾಪುರ ಝೋನಲ್ ಸಮಿತಿಗಳ ಅಲರ್ಟ್ 2020. ಉಡುಪಿ ನೇಜಾರು ಮುನೀರುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಿತು.

ಮುಖ್ಯ ತರಬೇತುದಾರರಾಗಿ ಆಗಮಿಸಿದ ರಾಜ್ಯ SMA ಪ್ರ‌.ಕಾರ್ಯದರ್ಶಿ ಜೆಪ್ಪು ಅಬ್ದುರ್ಹ್ಮಾನ್ ಮದನಿ, ತಕ್ವಾದೊಂದಿಗೆ ಸಂಘಟನಾ ಕಾರ್ಯದಲ್ಲಿ ಕೈಜೋಡಿಸಿದರೆ ಇಹ ಪರ ಜೀವನದಲ್ಲಿ ಗೌರವ ಯಶಸ್ವಿ ಕಟ್ಟಿಟ್ಟ ಬುತ್ತಿ ಎಂದೂ, ಸಂಘಟನಾ ಕಾರ್ಯದಲ್ಲಿ ನಮಗೆ ಅದರಿಂದಾಗಿ ಸಿಗುವ ಲಾಭವನ್ನು ಚಿಂತಿಸುವುದಕ್ಕಿಂತಲೂ ಮಿಗಿಲಾಗಿ ನನ್ನಿಂದ ಸಂಘಟನೆಗೆ ಏನು ಮಾಡಲು ಸಾಧ್ಯ ಎಂದು ಚಿಂತನೆ ನಡೆಸಿ ಕಾರ್ಯಪ್ರವರ್ತರಾಗಬೇಕೆಂದು ಕರೆ ನೀಡಿದರು.

ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ಅನುಸ್ಮರಣಾ ಭಾಷಣ ಮಾಡಿದ ರಾಜ್ಯ ಇಹ್ಸಾನ್ ಕನ್ವೀನರ್ ಕಲ್ಕಟ್ಟ ಅಬ್ದುರ್ಹ್ಮಾನ್ ರಝ್ವಿ, ಬೇಕಲ್ ಉಸ್ತಾದ್ ತನ್ನ ಜೀವಿತಾವಧಿಯಲ್ಲಿ ಆದರ್ಶವನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ, ಅದನ್ನು ಅನುಸರಿಸೋಣ ಎಂದರು. ಸಭೆಯನ್ನು ರಾಜ್ಯ SSF ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಉಧ್ಘಾಟಿಸಿದರು.ರಾಜ್ಯ SEDC ಅಧ್ಯಕ್ಷ KKM ಕಾಮಿಲ್ ಸಖಾಫಿ, ರಾಜ್ಯ SJM ಅಧ್ಯಕ್ಷ ಆತೂರ್ ಸ‌ಅದ್‌ ಮುಸ್ಲಿಯಾರ್ ಶುಭ ಹಾರೈಸಿ ಮಾತನಾಡಿದರು.
SMA ಜಿಲ್ಲಾಧ್ಯಕ್ಷ ಮನ್ಸೂರ್ ಕೋಡಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ SMA ಪ್ರ.ಕಾರ್ಯದರ್ಶಿ
ಅಬ್ದುರ್ರಶೀದ್ ಸಖಾಫಿ , ರಾಜ್ಯ SMA ನಾಯಕ ಗುಡ್ ವಿಲ್ ಹಾಜಿ, ಕುಂದಾಪುರ ಝೋನಲ್ ಪ್ರ.ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್,
ಪಡುಬಿದ್ರೆ ಝೋನಲ್ ಪ್ರ‌.ಕಾರ್ಯದರ್ಶಿ ಇಬ್ರಾಹಿಂ ನಯೀಮಿ, ಪಡುಬಿದ್ರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ತವಕ್ಕಲ್ , YBC ಬಾವ ಮೂಳೂರು, ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ MA ಬಾವ ಹಾಜಿ, ಹಾಗೂ ಕಾರ್ಕಳ ಉಡುಪಿ, ಕಾಪು ಹಾಗೂ ಕುಂದಾಪುರ ರೀಜನಲ್ ಅಧ್ಯಕ್ಷ ಪ್ರ.ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಭಾಗವಹಿಸಿದ್ದರು.

SMA ಉಡುಪಿ ಜಿಲ್ಲಾ ಕಾರ್ಯದರ್ಶಿ NC ರಹೀಂ ಹೊಸ್ಮಾರ್ ಸ್ವಾಗತಿಸಿ ಅಬ್ದುಲ್ ಬಾರಿ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿದರು.