ರಿಯಾದ್:ಸೌದಿ ಅರೇಬಿಯಾದಿಂದ ಅಂತಿಮ ನಿರ್ಗಮನ ಅವಧಿಯನ್ನು ಈ ತಿಂಗಳ 31ರ ವರೆಗೆ ವಿಸ್ತರಿಸಲು ದೊರೆ ಸಲ್ಮಾನ್ ಆದೇಶಿಸಿದ್ದಾರೆ. ವೀಸಾ ವಿಸ್ತರಣೆಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ. ನಿರ್ಗಮನ ವೀಸಾವನ್ನು ಉಚಿತವಾಗಿ ವಿಸ್ತರಿಸಲಾಗುವುದು.
ಈಗಾಗಲೇ ಅಂತಿಮ ನಿರ್ಗಮನವನ್ನು ಪಡೆದುಕೊಂಡಿದ್ದು, ನಿಗದಿತ ಸಮಯದೊಳಗೆ ಸೌದಿ ಅರೇಬಿಯಾದಿಂದ ನಿರ್ಗಮಿಸಲು ಸಾಧ್ಯವಾಗದವರಿಗೆ ನಿರ್ಗಮನ ವೀಸಾವನ್ನು ಈ ತಿಂಗಳ 31ರ ವರೆಗೆ ವಿಸ್ತರಿಸಬೇಕೆಂದು ದೊರೆ ಸಲ್ಮಾನ್ ನಿರ್ದೇಶಿಸಿದ್ದಾರೆ.
ನಿರ್ಗಮನ ವೀಸಾ ಅವಧಿ ಮುಗಿದ ನಂತರ ಮನೆಗೆ ಮರಳಲು ಸಾಧ್ಯವಾಗದ ಅನೇಕರಿಗೆ ದೊರೆ ಸಲ್ಮಾನ್ ಅವರ ಆದೇಶವು ಸಮಾಧಾನಕರವಾಗಿದೆ. ನಿರ್ಗಮನ ವೀಸಾವನ್ನು ವಿಸ್ತರಿಸುವ ರಾಜರ ಪ್ರಸ್ತಾವನೆಯನ್ನು ಜಾರಿಗೆ ತರಲು ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ ಕೆಲಸ ಮಾಡುತ್ತಿರುವುದಾಗಿ ಸೌದಿ ಪಾಸ್‌ಪೋರ್ಟ್ ನಿರ್ದೇಶನಾಲಯ ತಿಳಿಸಿದೆ.
ನಿರ್ಗಮನ ವೀಸಾಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ.ಜವಾಝಾತ್ ಕಚೇರಿಗೆ ತೆರಳುವ ಅಗತ್ಯವಿಲ್ಲ.ನಿರ್ಗಮನ ವೀಸಾವನ್ನು ಉಚಿತವಾಗಿ ವಿಸ್ತರಿಸಲಾಗುತ್ತಿದ್ದು,29,000 ಮಂದಿಗೆ ಅಂತಿಮ ನಿರ್ಗಮನವನ್ನು ಈಗಾಗಲೇ ವಿಸ್ತರಿಸಿ ನೀಡಲಾಗಿದೆ.
ಇನ್ನಷ್ಟು ಸುದ್ದಿಗಳು
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬತ್ತಾ ಸಮಿತಿಗೆ ನೂತನ ಸಾರಥ್ಯ
ನಿಲುವು ಬದಲಿಸಿದ ವಾಟ್ಸಾಪ್: ಸದ್ಯಕ್ಕೆ ಗೌಪ್ಯತಾ ನೀತಿ ಬದಲಾವಣೆಯಿಲ್ಲ
ಹಿಂದೂ ದೇವತೆಗಳನ್ನು ಅಪಮಾನಿಸಿದವರಿಗೆ ಸಚಿವ ಸ್ಥಾನ- ಯತ್ನಾಳ ಫುಲ್ ಗರಂ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್
ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿ: ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ