janadhvani

Kannada Online News Paper

ಕೋವಿಡ್ ನಿಂದಾಗಿ ತಟಸ್ಥಗೊಂಡಿದ್ದ ಸಿಎಎ: ಶೀಘ್ರದಲ್ಲೇ ಜಾರಿಗೆ- ನಡ್ಡಾ

ಸಿಲಿಗುರಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪೌರತ್ವ(ತಿದ್ದುಪಡಿ) ಕಾಯ್ದೆ ಜಾರಿಗೊಳಿಸುವುದು ವಿಳಂಬವಾಗಿದ್ದು, ಶೀಘ್ರದಲ್ಲೇ ಕಾನೂನು ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೋಮವಾರ ಹೇಳಿದ್ದಾರೆ.ಉತ್ತರ ಬಂಗಾಳದ ಸಾಮಾಜಿಕ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ನಡ್ಡಾ “ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಸಿಎಎ ಅನುಷ್ಠಾನ ವಿಳಂಬವಾಯಿತು. ಆದರೆ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಈಗ ಅದರ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲೇ ಜಾರಿಗೆ ತರಲಾಗುವುದು” ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com