janadhvani

Kannada Online News Paper

ವಿಧಾನಸಭಾ ಅಧಿವೇಶನ: ಬಿಜೆಪಿ ನಾಯಕರ ಮಧ್ಯೆ ಪರಸ್ಪರ ವಾಗ್ವಾದ

ಬೆಂಗಳೂರು:ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭಗೊಂಡಿದ್ದು, ಈಗಾಗಲೇ ಸರ್ಕಾರ ಮತ್ತು ವಿಪಕ್ಷಗಳು ಕಲಾಪವನ್ನು ನಡೆಸಲು ಸಿದ್ಧತೆ ಮಾಡಿಕೊಂಡಿವೆ. ಅಭಿವೃದ್ಧಿ ವಿಚಾರವಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯಬೇಕಾದ ಚರ್ಚೆ, ಕಿತ್ತಾಟಗಳು ಸರ್ಕಾರದ ಪ್ರತಿನಿಧಿಗಳ ಮಧ್ಯೆಯೇ ನಡೆದು ಅಚ್ಚರಿ ಮೂಡಿಸಿದೆ.

ಬಿಜೆಪಿ ಶಾಸಕ ಮತ್ತು ಸಚಿವರ ಮಧ್ಯೆ ಹೊಯ್‌ಕೈ ಉಂಟಾದ ಘಟನೆ ವಿಧಾನಸೌಧದ ಶಾಸಕರ ಕ್ಯಾಂಟೀನ್ ಬಳಿ ನಡೆದಿದೆ. ತೋಟಗಾರಿಕಾ ಸಚಿವ ನಾರಾಯಣ ಗೌಡ ಹಾಗೂ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಜಟಾಪಟಿ ಉಂಟಾಗಿದ್ದು, ಇಬ್ಬರೂ ನಾಯಕರು ಪರಸ್ಪರ ಏಕವಚನದಲ್ಲಿ ಬೈದುಕೊಂಡು ವಾಗ್ವಾದ ನಡೆಸಿದ್ದಾರೆ. ಕ್ಷೇತ್ರದ ಅನುದಾನ ವಿಚಾರದಲ್ಲಿ ಸಚಿವ ನಾರಾಯಣ ಗೌಡ ಹಾಗೂ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಏರುಧ್ವನಿ ಧ್ವನಿಯಲ್ಲಿ ವಾಗ್ವಾದ ನಡೆದಿದ್ದು, ಈ ವೇಲಳೆ ಇಬ್ಬರನ್ನು ಸಚಿವ ಸಿಟಿ ರವಿ, ಈಶ್ವರಪ್ಪ ಮತ್ತು ಸೋಮಣ್ಣ ಸಮಾಧಾನಪಡಿಸಿದ್ದಾರೆ.

ಶಾಸಕರ ಕ್ಯಾಂಟೀನ್‌ನಲ್ಲಿ ಕಿತ್ತಾಟ ನಡೆಸಿದ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ಅವರು ಯಾವ ಕೆಲಸನೂ ಮಾಡೋ ಯೋಗ್ಯತೆ ಇಲ್ಲ, ಕ್ಷೇತ್ರದ ಕೆಲಸ ಮಾಡದ ನೀನು ಎಂತಹ ಸಚಿವ ಎಂದು ಸಚಿವ ನಾರಾಯಣ್ ಗೌಡ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಈ ವೇಳೆ ನೀನು ನನ್ನ ಕಛೇರಿಗೆ ಬಂದು ಮಾತನಾಡು‌ ಎಂದ ನಾರಾಯಣ್ ಗೌಡ ಅವರಿಗೆ ನಾನೇಕೆ ನಿನ್ನ ಕಚೇರಿಗೆ ಬರಲಿ ಎಂದು‌ ಕೆಟ್ಟ ಶಬ್ದದಿಂದಲೇ ಗೌಡರಿಗೆ ಅವಾಜ್ ಹಾಕಿದ್ದಾರೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ಇಬ್ಬರು ಕೂಡ ‌ಅಲ್ಲಿದ್ದ ಚೇರ್‌ಗಳನ್ನ‌ ಎಳೆದಾಡಿ ಕೂಗಾಡಿದ್ದಾರೆ. ಒಂದು ಹಂತದಲ್ಲಿ ‌ಕೈಕೈ ಮಿಲಾಯಿಸೋ ಮಟ್ಟಕ್ಕೆ ಹೋಗಿದ್ದ ಜಗಳವನ್ನು ಶಾಸಕ ಸುನೀಲ್ ಕುಮಾರ್, ಸಿಟಿ ರವಿ, ಅನ್ನದಾನಿಯಿಂದ ಇಬ್ಬರನ್ನ ಬಿಡಿಸೋ ಪ್ರಯತ್ನವಾಗಿದೆ. ಆದರೂ ಸುಮ್ಮನಾಗದೆ ಇಬ್ಬರು ಮತ್ತೆ ಜಗಳದಲ್ಲಿ‌ ಬ್ಯುಸಿಯಾಗಿದ್ದಾರೆ.

error: Content is protected !! Not allowed copy content from janadhvani.com