ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಧ್ವಜ ದಿನದ ಅಂಗವಾಗಿ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಸುಳ್ಯ ನಗರ ಪಂಚಾಯತ್ ಪೌರ ಕಾರ್ಮಿಕರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೆಪ್ಟಂಬರ್ 19ರಂದು ನಗರ ಪಂಚಾಯತ್ ಪೌರ ಸಮ್ಮೇಳನ ಸಭಾಂಗಣದಲ್ಲಿ ಜರಗಿತು.

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ನ ವಿವಿಧ ಕ್ಷೇತ್ರಗಳ ಕಾರ್ಯಾಚರಣೆಗಳನ್ನು ಹಾಗೂ ಪೌರ ಕಾರ್ಮಿಕ ದಿನದಂದು ನಡೆಸಿದ ಶುಚಿತ್ವ ಅಭಿಯಾನಕ್ಕೆ ಎಸ್ಸೆಸ್ಸೆಫ್ ನೀಡಿದ ಸಾಥ್ ನ್ನು ನೆನಪಿಸಿ ಅವರು ಶ್ಲಾಘಿಸಿದರು. ಸುಳ್ಯ ನಗರ ಪಂಚಾಯತ್ ಕಂದಾಯ ನಿರೀಕ್ಷಕ ಧನಂಜಯ ಶುಭ ಹಾರೈಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆ ವಹಿಸಿದರು.

ನಗರ ಪಂಚಾಯತ್ ಪೌರ ಕಾರ್ಮಿಕರಿಗೆ ಭೋಜನಾ ವ್ಯವಸ್ಥೆ ಮಾಡಲಾಯಿತು. ನಗರ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಳ್ಯ ಡಿವಿಷನ್ ಸಮಿತಿ ಸದಸ್ಯರಾದ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ, ಕಬೀರ್ ಜಟ್ಟಿಪಳ್ಳ, ನೌಶಾದ್ ಕೆರೆಮೂಲೆ, ಶಮೀರ್ ಡಿ.ಎಚ್ ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ