ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್) ಬುಡೋಳಿ ಶಾಖೆಯ ವತಿಯಿಂದ ದಿನಾಂಕ 13/09/2020 ರಂದು ಮಗ್ರಿಬ್ ನಮಾಝ್ ಬಳಿಕ ಬಹುವನ್ಯರಾದ ಹೈದರ್ ಸಖಾಫಿ ಉಸ್ತಾದರ ಮನೆಯಲ್ಲಿ ಮಫಾಝ ಕ್ಯಾಂಪ್ ನಡೆಯಿತು. ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ಉಪಾಧ್ಯಕ್ಷರಾದ ಮುಸ್ತಫಾ ರವರ ಸ್ವಾಗತದೊಂದಿಗೆ ಖಿಳ್ರ್ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ಮದನಿ ಉಸ್ತಾದರು ಉದ್ಘಾಟಿಸಿ .ಎಸ್ಸೆಸ್ಸೆಫ್ ಬುಡೋಳಿ ಶಾಖೆ ಸ್ಥಾಪಿಸಿ ಹನ್ನೊಂದು ವರ್ಷದ ಸಂಭ್ರಮವನ್ನು ಮಫಾಝ ಕ್ಯಾಂಪ್ ಮಾಡುವುದರ ಮೂಲಕ ಹನ್ನೂಂದನೆಯ ವಾರ್ಷಿಕ ನಡೆಸಿರುವುದಾಗಿ ತಿಳಿಸಿದರು.
ಎಸ್ ವೈ ಎಸ್ ಶೇರ ಬುಡೋಳಿ ಬ್ರಾಂಚ್ ಅಧ್ಯಕ್ಷರಾದ ಹೈದರ್ ಸಖಾಫಿ ಉಸ್ತಾದರು ಶುಭಹಾರೈಸಿದರು.ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಟ್ಯೂಟರ್ ಉಮರುಲ್ ಫಾರೂಕ್ ಹನೀಫಿ ಪರ್ಲೊಟ್ಟು ರವರು ಕಾರ್ಯಕರ್ತರಿಗೆ ಸಂಘಟನಾ ತರಗತಿಯನ್ನು ನಡೆಸಿದರು.
ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್ ಸಅದಿಯವರು ಅಧ್ಯಕ್ಷೀಯ ಭಾಷಣ ಮಾಡಿದರು,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕಲಂದರ್ ಪಾಟ್ರಕೋಡಿಯವರು ಶುಭಹಾರೈಸಿದರು.ಎಸ್ಸೆಸ್ಸೆಫ್ ಬುಡೋಳಿ ಶಾಖೆಯ ಜೊತೆ ಕಾರ್ಯದರ್ಶಿ ಆಶಿಕ್ ಧನ್ಯವಾದಗೈದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್‌ನ ಟೀ ಶರ್ಟನ್ನು ಕಾರ್ಯಕರ್ತರಿಗೆ ವಿತರಿಸಲಾಯಿತು.ಕೊನೆಯಲ್ಲಿ ದುವಾ ಮಾಡಿ ಮೂರು ಸ್ವಲಾತ್ ನೂಂದಿಗೆ ಕ್ಯಾಂಪ್ ಮುಕ್ತಾಯಗೊಂಡಿತು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ