ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ಇದರ ವತಿಯಿಂದ ದಾದಾಭಾಯ್ ಟ್ರಾವೆಲ್ಸ್ ಹಾಗೂ ಇತರ ಸಂಸ್ಥೆಗಳ ಸಹಕಾರದಿಂದ ಇಂದು ದಮ್ಮಾಮ್ ವಿಮಾನ ನಿಲ್ದಾಣದಿಂದ 170 ರಷ್ಟು ಪ್ರಯಾಣಿಕರರೊಂದಿಗೆ ವಿಮಾನ ಮಂಗಳೂರಿನತ್ತ ಹಾರಾಟ ಆರಂಭಿಸಿದೆ.
ಮಧ್ಯಾಹ್ನ 11.30 ಗಂಟೆಗೆ ಹೊರಡಬೇಕಾದ ವಿಮಾನ ಕೆಲವು ತಾಂತ್ರಿಕ ದೋಷದಿಂದಾಗಿ ಎರಡು ಗಂಟೆ ತಡವಾಗಿ ಹೊರಡುವಂತಾಗಿದೆ.
ಯಾತ್ರೆಯ ಮೊದಲೇ ಪ್ರಯಾಣಿಕರಿಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ನೀಡಿ ಸರಕಾರದ ಆದೇಶದಂತೆ Air Suvidha, Arogya Setu ಹಾಗೂ ಇತರ ಫಾರ್ಮ್ ಗಳನ್ನು ಭರ್ತಿ ಮಾಡಲು ಸೂಚಿಸಿದ್ದಲ್ಲದೇ, ಆನೈನ್ ಫಾರ್ಮ್ ಭರ್ತಿ ಮಾಡುವುದರ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಕೆಸಿಎಫ್ ಕಾರ್ಯಕರ್ತರೇ ಇದರ ಜವಾಬ್ದಾರಿಯನ್ನು ತೆಗೆದು ಎಲ್ಲಾ ಫಾರ್ಮ್ ಗಳನ್ನು ಭರ್ತಿ ಮಾಡಿ ನೀಡಿಲಾಗಿದೆ.
ಪ್ರಯಾಣಿಕರಿಗೆ ಬೇಕಾದ ಕೋವಿಡ್ ಸುರಕ್ಷತೆಯ ಕಿಟ್ ಹಾಗೂ ಲಘು ಉಪಹಾರದ ಕಿಟ್ ಕೂಡ ವಿತರಿಸಲಾಗಿದೆ ಎಂದು ಸಂಘಟಕರು ಜನಧ್ವನಿ ಪತ್ರಿಕೆಗೆ ತಿಳಿಸಿದ್ದಾರೆ.