janadhvani

Kannada Online News Paper

ಶಾಸಕ ಜಮೀರ್ ಅಹ್ಮದ್ ಖಾನ್ ಅನಾರೋಗ್ಯ: ಶೀಘ್ರ ಗುಣಮುಖರಾಗಲು ಪ್ರಾರ್ಥನೆ

ಚಿಕ್ಕಮಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ವತಿಯಿಂದ ಜಿಲ್ಲಾ ಅಧ್ಯಕ್ಷ ಹಾಜಿ ಮೊಹಮ್ಮದ್ ಶಾಹಿದ್ ರಜ್ವಿ ಅವರ ನೇತೃತ್ವದಲ್ಲಿ ನಗರದ ಉಪ್ಪಳ್ಳಿಯಲ್ಲಿರುವ ಪಾಂಚ್ ಪೀರ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಂಝುಲ್ ಈಮಾನ್ ಮುಖ್ಯ ಸದರ್ ಉಸ್ತಾದ್ ಮೌಲಾನ ಇರ್ಷಾದ್ ರಾಜಾ ಮತ್ತು ಮಸೀದಿ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಶುಕ್ರವಾರ ಪ್ರಾರ್ಥನೆ ನಂತರ ಶಾಸಕ ಹಾಗೂ ಮಾಜಿ ವಕ್ಫ್ ಸಚಿವರೂ ಆದ ಬಿ ಝೆಡ್ ಜಮೀರ್ ಅಹಮದ್ ಖಾನ್ ರವರಿಗೆ ಶೀಘ್ರ ಗುಣಮುಖಕ್ಕೆ ವಿಶೇಷ ಪ್ರಾರ್ಥನೆಯ ಮೂಲಕ ದುಆ ಮಾಡಲಾಯ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಸನ್ಮಾನ್ಯ ಜಮೀರ್ ಅಹಮದ್ ಖಾನ್ ರವರು ಹಿಂದಿನಿಂದಲೂ ಜನಪರ ಕಾಳಜಿ ವಹಿಸಿ ಸರ್ವಧರ್ಮ ಪ್ರೇಮಿ ಎಲ್ಲಾ ಸಮುದಾಯ ದವ ರೊಂದಿಗೆ ಅಪಾರ ಪ್ರೀತಿ ಗಿಟ್ಟಿಸಿಕೊಂಡಿರುವ ಜನನಾಯಕ ಬಡವರ ಬಂದು ಇತ್ತೀಚೆಗೆ ಕೊರೋಣ ವಾರಿಯರ್ಸ್ ರೂಪದಲ್ಲಿ ಮುಂದಾಳತ್ವ ವಹಿಸಿದ್ದರು.

ಇದೀಗ ಇವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಾಗಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅಲ್ಲಾಹನು ಜಮೀರ್ ಅಹಮದ್ ರವರಿಗೆ ಶೀಘ್ರ ಸಂಪೂರ್ಣ ಗುಣಮುಖ ಮಾಡಲಿ ಎಂಬುದಾಗಿ ಆಶಿಸುತ್ತೇನೆ ಇಂಥ ಅಪದ್ಬಂಧವರು ಜನರ ಸೇವೆಗೆ ಅತಿವಶ್ಯಕ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ KMJ ತಾಲ್ಲೂಕ್ ಅಧ್ಯಕ್ಷ ಆರಿಫ್ ಅಲಿ ಖಾನ್, ಮನ್ಸೂರ್ ಅಹಮದ್, ಟಿಪ್ಪು ಸುಲ್ತಾನ್ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಜಂಶೀಧ್ ಖಾನ್, ಇನ್ನಿತರೆ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಕಾರ್ಯಕರ್ತರು ಉಪ್ಥಿತರಿದ್ದರು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರು ಆದ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com