janadhvani

Kannada Online News Paper

ಉಡುಪಿ ಮುಸ್ಲಿಂ ಜಮಾಅತ್ ವತಿಯಿಂದ ಅನುಸ್ಮರಣೆ ಹಾಗೂ ಪ್ರಾರ್ಥನಾ ಮಜ್ಲಿಸ್

ಉಡುಪಿ: ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ನಮ್ಮಿಂದ ಅಗಲಿದ ಕೆ ಎಮ್ ಜೆ ಜಿಲ್ಲಾಧ್ಯಕ್ಷರಾಗಿದ್ದ ಮೌಲಾನಾ ನಝೀರ್ ಅಝ್ಹರಿ ಹಝ್ರತ್, ಸದಸ್ಯರಾಗಿದ್ದ ಮನ್ಹರ್ ಇಬ್ರಾಹಿಂ, ರಾಜ್ಯ ಕಾರ್ಯದರ್ಶಿಯಾಗಿದ್ದ ಎಸ್ ಅಬ್ದುರ್ರಹ್ಮಾನ್ ಇಂಜಿನಿಯರ್ ಹಾಗೂ ಇನ್ನಿತರ ನಾಯಕರ ಹಾಗೂ ಕಾರ್ಯಕರ್ತರ ಅನುಸ್ಮರಣೆ ಹಾಗೂ ಪ್ರಾರ್ಥನಾ ಮಜ್ಲಿಸ್ ಉಡುಪಿ ಅಜ್ಜರಕಾಡು ಸುನ್ನೀ ಸೆಂಟರ್ ನಲ್ಲಿ ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿಯಾದ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಇವರ ನೇತೃತ್ವದಲ್ಲಿ ನಡೆಯಿತು
ರಾಜ್ಯ ಮುಸ್ಲಿಂ ಜಮಾಅತ್ ಜಿಲ್ಲಾ ಸಂಚಾಲಕ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅನುಸ್ಮರಣಾ ಭಾಷಣ ಮಾಡಿದರು.

ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಕೆ ಎಮ್ ಜೆ ಜಿಲ್ಲಾ ಉಪಾಧ್ಯಕ್ಷರಾದ ಜಿ ಸರ್ದಾರ್ ಗುಲ್ವಾಡಿ,ಬಿ ಎಸ್ ಎಸ್ ರಫೀಕ್ ಕುಂದಾಪುರ, ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಹಾಜಿ ಮೊಯ್ದಿನ್ ಗುಡ್ವಿಲ್, ಪ್ರಧಾನ ಕಾರ್ಯದರ್ಶಿ ಅಡ್ವಕೆಟ್ ಹಂಝತ್ ಹೆಜಮಾಡಿ, ಎಸ್ ಡಿ ಐ ಜಿಲ್ಲಾಧ್ಯಕ್ಷರಾದ ಸೆಯ್ಯದ್ ಫರೀದ್ ಉಡುಪಿ, ನಾಯಕರಾದ ಟಿ ಎಮ್ ರಹ್ಮತುಲ್ಲ ಹೂಡೆ,ಹೆಚ್ ಶಹಾಬಾನ್ ಹಂಗಳೂರು ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಕೆ ಎಸ್ ಎಮ್ ಮನ್ಸೂರ್ ದೊಡ್ಡಣಗುಡ್ಡೆ, ವೈ ಎಮ್ ಇಲ್ಯಾಸ್ ಕಟಪಾಡಿ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು ಸ್ವಾಗತಿಸಿದರು
ಸುಬ್ಹಾನ್ ಅಹ್ಮದ್ ಹೊನ್ನಾಳ ನಿರೂಪಿಸಿದರು ಅಡ್ವಕೆಟ್ ಇಲ್ಯಾಸ್ ನಾವುಂದ ವಂದಿಸಿದರು.

error: Content is protected !! Not allowed copy content from janadhvani.com