ಕಿನ್ಯಾ: ಆಯುಷ್ಮಾನ್ ಭಾರತ್ ಹಾಗೂ ಆಯೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳನ್ನು ಪಡೆಯುವ ಆಯುಷ್ಮಾನ್ ಕಾರ್ಡ್ ನೊಂದಣಿ ಕಾರ್ಯಕ್ರಮವು SSF & SYS ಮೀಂಪ್ರಿ ಕಿನ್ಯಾ ಶಾಖಾ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್.6 ರಂದು ಮೀಂಪ್ರಿ ಮದ್ರಸದಲ್ಲಿ ನಡೆಯಿತು.

SYS ಅಧ್ಯಕ್ಷರಾದ ಅಲೀ ಕುಂಞಿ ಯವರ ಘನ ಅಧ್ಯಕ್ಷತೆಯಲ್ಲಿ ಸಯ್ಯಿದ್ ಅಲವಿ ತಂಙಳ್ ರವರು ದುಆ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.ಹೈದರ್ ಮುಸ್ಲಿಯಾರ್ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಗ್ರಾಮ ಪಂಚಾಯತ್ ನ ಸಿರಾಜುದ್ದೀನ್ ಕಿನ್ಯಾ, ಫಾರೂಕ್ ಕಿನ್ಯಾ ಹಾಗೂ ಹಮೀದ್ ಕಿನ್ಯಾ ಮಾತನಾಡಿ,”ಇಂತಹ ಕಾರ್ಯಕ್ರಮವನ್ನು ನಮ್ಮ ಕಾಲ ಬುಡಕ್ಕೆ ತಲುಪಿಸಲು ಯಶಸ್ವಿಯಾದ SYS , SSF ಯೋಜನೆಯು ಶ್ಲಾಘನಾರ್ಹ” ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮೀಂಪ್ರಿ ಮಸ್ಜಿದ್ ಅಧ್ಯಕ್ಷರಾದ ಮೊಯಿದಿನ್ ಸಂಕೇಶ, ಮೀಂಪ್ರಿ ಮದ್ರಸಾಧ್ಯಾಪಕರಾದ ಇರ್ಶಾದ್ ಅಝ್ಹರಿ, SYS ನಾಯಕರಾದ ಮಹಬೂಬ್ ಸಖಾಫಿ, SSF ಕಿನ್ಯಾ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದ್ ತಂಙಳ್, ಶಾಖಾ ಅಧ್ಯಕ್ಷರು ನೌಫಲ್ ಅಹ್ಸನಿ, SYS ದೇರಳಕಟ್ಟೆ ಸೆಂಟರ್ ನಾಯಕರಾದ ಇಸ್ಮಾಯಿಲ್ ಸಅದಿ ಉರುಮನೆ, ಅಬ್ದುಲ್ ಹಮೀದ್ ಮೀಂಪ್ರಿ ಹಾಗೂ ಇತರ ಸದಸ್ಯರು ಉಪಸ್ಥಿತಿಯಿದ್ದರು.
ಊರಿನ 250 ಕ್ಕಿಂತಲೂ ಮಿಕ್ಕವರು ಈ ಯೋಜನೆಯ ಸದುಪಯೋಗವನ್ನು ಪಡೆದರು.
SYS ದ ಕ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕಿನ್ಯಾ ಸ್ವಾಗತಿಸಿ ನಿರೂಪಿಸಿದರು. SYS ಬ್ರಾಂಚ್ ಕಾರ್ಯದರ್ಶಿ ಫಾರೂಕ್ ಸಖಾಫಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ