janadhvani

Kannada Online News Paper

ಸ್ವೀಡನ್: ಬಲಪಂಥೀಯ ಉಗ್ರಗಾಮಿಗಳಿಂದ ಖುರ್ಆನ್ ದಹನ- ಹಿಂಸಾಚಾರ

ಸ್ಟಾಕ್​ಹಾಮ್:ಇಸ್ಲಾಮ್ ವಿರೋಧಿ ಪ್ರತಿಭಟನಾಕಾರರು ಖುರ್ ಆನ್ ಗ್ರಂಥಕ್ಕೆ ಅವಮಾನ ಮಾಡಿ ಸುಟ್ಟು ಹಾಕಿದ್ದರಿಂದ ಸ್ವೀಡನ್ ದೇಶದ ಗಡಿರಾಜ್ಯ ಮಾಲ್ಮೋ ಶುಕ್ರವಾರ ಹಲವು ಹಿಂಸಾಚಾರಗಳಿಗೆ ಸಾಕ್ಷಿಯಾಯಿತು. ಡೆನ್ಮಾರ್ಕ್ ದೇಶದ ಕಟ್ಟರ್ ಬಲಪಂಥೀಯ ನಾಯಕರೊಬ್ಬರ ಆಗಮನವನ್ನು ತಡೆದು ವಾಪಸ್ ಕಳುಹಿಸಲಾಗಿದೆ. ಅದನ್ನ ವಿರೋಧಿಸಿ ಸ್ವೀಡನ್​ನಲ್ಲಿ ಪ್ರತಿಭಟನಾಕಾರರು ಗಲಭೆ ಮಾಡಿದ್ದಾರೆ.

ಈ ಹಿಂಸಾಚಾರಕ್ಕೆ ಕಿಡಿ ಹಚ್ಚಿದ್ದು ಸ್ವೀಡನ್ ದೇಶದ ಮಾಲ್ಮೋದಲ್ಲಿ ನಡೆದ ಇಸ್ಲಾಮ್ ವಿರೋಧಿ ಪ್ರತಿಭಟನೆ. ಈ ಪ್ರತಿಭಟನೆ ವೇಳೆ ಖುರ್ ಆನ್ ಗ್ರಂಥವನ್ನು ಜನರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಡೆನ್ಮಾರ್ಕ್ ದೇಶದ ಬಲಪಂಥೀಯ “ಹಾರ್ಡ್ ಲೈನ್” ಪಕ್ಷದ ನಾಯಕ ರಾಸ್ಮಸ್ ಪಲುಡನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಇವರ ಉಪಸ್ಥಿತಿಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂದು ಮುನ್ನೆಚ್ಚರಿಕೆಯಾಗಿ ಸ್ವೀಡನ್ ಪೊಲೀಸರು ಇವರನ್ನ ಮಾಲ್ಮೋ ಗಡಿ ಬಳಿಯೇ ಬಂಧಿಸಿದರು. ನಂತರ ಇವರನ್ನು 2 ವರ್ಷ ಸ್ವೀಡನ್​ಗೆ ಆಗಮಿಸದಂತೆ ನಿರ್ಬಂಧ ಹೇರಿ ವಾಪಸ್ ಕಳುಹಿಸಲಾಯಿತು.

ಆದರೆ, ರಾಸ್ಮುಸ್ ಪಲುಡನ್ ವಾಪಸ್ ಹೋದ ನಂತರ ಇತ್ತ ಇಸ್ಲಾಮ್ ವಿರೋಧಿ ಪ್ರತಿಭಟನಾಕಾರರು ತಮ್ಮ ರ್ಯಾಲಿ ಮುಂದುವರಿಸಿದರು. ಖುರ್ ಆನ್ ಗ್ರಂಥಕ್ಕೆ ಅವಮಾನ ಮಾಡಿಕ ಕಾರಣಕ್ಕೆ ಪೊಲೀಸರು ಮೂವರನ್ನು ಬಂಧಿಸಿದರು. ಅದಾದ ಕೆಲ ಗಂಟೆಗಳ ನಂತರ 300 ಜನ ಪ್ರತಿಭಟನಾಕಾರರು ಮಾಲ್ಮೋದ ಬೀದಿಗಳಲ್ಲಿ ಹಿಂಸಾಚಾರ, ಗಲಭೆ ನಡೆಸಿದರು. ಟೈರ್ ಸುಟ್ಟು, ಪೊಲೀಸರ ಮೇಲೆ ಕಲ್ಲು ತೂರಾಟ ಎಸಗಿದ್ದಾರೆ. ಬೆಳಗ್ಗೆ ನಡೆದ ಖುರ್ ಆನ್ ಸುಡುವ ಘಟನೆಗೂ ಈಗ ನಡೆಯುತ್ತಿರುವ ಪ್ರತಿಭಟನೆಗೂ ಸಂಬಂಧ ಇದೆ ಎಂದು ಸ್ವೀಡನ್ ಪೊಲೀಸರು ಶಂಕಿಸಿದ್ದಾರೆ.

error: Content is protected !! Not allowed copy content from janadhvani.com