janadhvani

Kannada Online News Paper

ಎಸ್ಸೆಸ್ಸೆಫ್ ಆಯುಷ್’ಜೀಬ್ – ಉಚಿತ ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನ

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ಗಾಂಧಿನಗರ ಯುನಿಟ್ ಸಮಿತಿ ವತಿಯಿಂದ ಸುಳ್ಯ ನಗರ ವ್ಯಾಪ್ತಿಯ ಉಚಿತ ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಆಗಸ್ಟ್ 23, ಆದಿತ್ಯವಾರದಂದು ನಡೆಯಿತು.

ಸಯ್ಯದ್ ತಾಹಿರ್ ಸಅದಿ ಬಾಅಲವಿ ದುಆ ನೆರವೇರಿಸಿದರು. ಸುಳ್ಯ ನಗರ ವ್ಯಾಪ್ತಿಯ ಮುನ್ನೂರರಷ್ಟು ಜನರು ಈ ಅಭಿಯಾನದಲ್ಲಿ ಪಾಲ್ಗೊಂಡರು. ಪ್ರಥಮ ಕಾರ್ಡ್ ನ್ನು ಸಯ್ಯದ್ ತಾಹಿರ್ ಸಅದಿ ಬಾಅಲವಿ ಸಿದ್ದೀಖ್ ಕಟ್ಟೆಕಾರ್ ರವರಿಗೆ ನೀಡಿದರು. ಕಬೀರ್ ಜಟ್ಟಿಪಳ್ಳ, ರಶೀದ್ ಜಟ್ಟಿಪಳ್ಳ, ಫೈಝಲ್ ಜಟ್ಟಿಪಳ್ಳ, ರಝಾಖ್ ಜಟ್ಟಿಪಳ್ಳ ಉಪಸ್ಥಿತರಿದ್ದರು.

ಅಶ್ರಫ್ ಸಖಾಫಿ ಕುಂಬಕ್ಕೋಡು, ಜುನೈದ್ ಸಖಾಫಿ ಜೀರ್ಮುಖಿ, ರಶೀದ್ ಝೈನಿ, ಲತೀಫ್ ಹರ್ಲಡ್ಕ,ಸ್ವಬಾಹ್ ಹಿಮಮಿ ಸಖಾಫಿ,ಎಮ್ ಎಸ್ ಅಶ್ರಫಿ,ಅಕ್ರಮ್,ಇಲ್ಯಾಸ್ ಗುರುಂಪು, ಸ್ವಾದಿಕ್ .ಪಿ.ಜಿ ,ಹಾರಿಸ್.C.A ,ಯುನಿಟಿನ ಅಧ್ಯಕ್ಷರಾದ ಸಿದ್ದೀಖ್ ಬಿ.ಎ ಅಭಿಯಾನಕ್ಕೆ ಶುಭ ಹಾರೈಸಿದರು. ಬಶೀರ್ ಕಲ್ಲುಮುಟ್ಲು ಸ್ವಾಗತಿಸಿ,ಯುನಿಟಿನ ಕ್ಯಾಂಪಸ್ ಕಾರ್ಯದರ್ಶಿ ಶಿಬಿಲಿ ಕುಂಬ್ಳೆಕ್ಕಾರ್ ವಂದಿಸಿದರು.

error: Content is protected !! Not allowed copy content from janadhvani.com