janadhvani

Kannada Online News Paper

ಕೊರೋನಾ ಪೀಡಿತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಧಾರ್ಮಿಕ ರೀತಿಯಲ್ಲಿ ನಡೆಸಿದ ಮುಸ್ಲಿಂ ಯುವಕರು

ಮಂಗಳೂರು. ಅ.23 : ಕೊರೋನಾ ಸೋಂಕಿನಿಂದ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣ ಸಮೀಪದ ಚತ್ರಮೈದಾನ ನಿವಾಸಿ ಸುಮಾರು 47ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರವನ್ನು ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಮೂಡಿಗೆರೆಯ ಚತ್ರ ಮೈದಾನದ ರುದ್ರಭೂಮಿಯ ಚಿತಾಗಾರಕ್ಕೆ ತಲುಪಿಸಿ ಜಿಲ್ಲಾಡಳಿತ & ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಪ್ರಕಾರದಂತೆ ಹಿಂದೂ ಸಂಪ್ರದಾಯ ವಿಧಿ ವಿಧಾನಗಳನ್ನು ಅನುಸರಿಸಿ ಪುದು ಗ್ರಾಮ ಪಂಚಾಯತ್ ಸದಸ್ಯರಾದ ಹಾಶೀರ್ ಪೇರಿಮಾರ್, ಶಿಹಾಬ್ ತಂಙಳ್ ರಿಲೀಫ್ ಸೆಲ್ ಕಾರ್ಯ ಸಂಯೋಜಕರಾದ ನೌಶಾದ್ ಮಲಾರ್, ಪಿ.ಎಮ್ ಸಿರಾಜ್ ಪೇರಿಮಾರ್, ಶ್ರೀ ಗಣೇಶ್ ಆಂಬ್ಯುಲೆನ್ಸ್ ನ ಚಾಲಕರಾದ ಶಮೀರ್ ಪಳ್ನೀರ್ ರವರು ಅಂತ್ಯಕ್ರಿಯೆ ಕಾರ್ಯವನ್ನು ನೆರವೇರಿಸಿದರು.

ಮೃತರ ಅಂತ್ಯಸಂಸ್ಕಾರದ ವೇಳೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳ, ಊರಿನ ನಾಗರಿಕರ ಮತ್ತು ಮೃತರ ಕುಟುಂಬಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿ ಅಂತ್ಯ ಕ್ರಿಯೆ ಕಾರ್ಯವನ್ನು ನಡೆಸಲಾಯಿತು.

error: Content is protected !! Not allowed copy content from janadhvani.com