janadhvani

Kannada Online News Paper

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನೆಲ್ಯಾಡಿ ವತಿಯಿಂದ ರಕ್ತದಾನ ಶಿಬಿರ

ನೆಲ್ಯಾಡಿ: 25/08/2020 ರಂದು ಪಾಪ್ಯುಲರ್ ಫ್ರಂಟ್ ಬ್ಲಡ್ ಫೋರಮ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ನಡೆಯಿತು. ಪ್ರಸ್ತುತ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಇಸ್ಲಾಮಿನಲ್ಲಿ ದಾನದ ಪ್ರತಿಫಲದ ಬಗ್ಗೆ ಪಾಪ್ಯುಲರ್ ಫ್ರಂಟ್ ಕಬಕ ವಲಯ ಅಧ್ಯಕ್ಷರಾದ ಉಸ್ಮಾನ್ ಎ. ಕೆ. ಸವಿಸ್ತಾರವಾಗಿ ವಿವರಿಸಿದರು.

ನೀವು ಜಾತಿಭೇದವಿಲ್ಲದೆ ಅಗತ್ಯ ರೋಗಿಗಳಿಗೆ ರಕ್ತವನ್ನು ಒದಗಿಸುವುತ್ತಿದ್ದೀರಿ ಇದು ನೀವು ಮಾಡುವ ಒಂದು ಉತ್ತಮ ಕಾರ್ಯವಾಗಿದೆ ಇದೇ ರೀತಿ ಮುಂದೆಯೂ ಸಮಾಜಮುಖಿ ಕೆಲಸಗಳನ್ನು ಮಾಡಲು ಭಗವಂತನು ದಯಪಾಲಿಸಲಿ ಎಂದು ಮುಖ್ಯೋಪಾಧ್ಯಾಯರಾದ ಆನಂದ ಅಜಿಲರವರು ಸಾಂದರ್ಭಿಕವಾಗಿ ಶುಭ ಹಾರೈಸಿದರು.

ರಕ್ತಕ್ಕೆ ಜಾತಿಯಿಲ್ಲ, ರಕ್ತಕ್ಕೆ ಧರ್ಮವಿಲ್ಲ, ರಕ್ತಕ್ಕೆ ಇರುವುದು ಭಗವಂತ ಸೃಷ್ಟಿಸಿದ ಗ್ರೂಪ್ ಮಾತ್ರ ಇರುವುದು,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವವು ಹಲವು ಬಾರಿ, ಹಲವು ಪ್ರದೇಶಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುವ ಮೂಲಕ ರೋಗಿಯ ಪ್ರಾಣ ಉಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದೀರಿ. ನಿಮ್ಮ ಈ ಕಾರ್ಯವು ಶ್ಲಾಘನೀಯ ಎಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯನಿರ್ವಾಹಕರಾದ ಪ್ರವೀಣ್ ಕುಮಾರ್ ನುಡಿದರು.

ಸುಮಾರು 2 ದಶಕಗಳ ಮೊದಲು ಸಮಯಕ್ಕೆ ಸರಿಯಾಗಿ ರಕ್ತವು ದೊರೆಯದೆ ಸಾವನ್ನಪ್ಪುವುದನ್ನು ಮನಗಂಡ ನಮ್ಮ ಸಂಘಟನೆಯು ಎರಡು ದಶಕಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ಬಾರಿ ಇಂತಹ ರಕ್ತದಾನ ಶಿಬಿರವನ್ನು ನಡೆಸಿ, ಅಲ್-ಹಮ್ದುಲಿಲ್ಲಾಹ್ ರಕ್ತವನ್ನು ರೋಗಿಗಳಿಗೆ ತಲುಪಿಸುವ ಮೂಲಕ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಸಂಘಟನೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸುವ ತಂಡವಿದೆ,ಇದರ ಉಪಯೋಗವನ್ನು ಯಾರು ಬೇಕಾದರೂ ಪಡೆದುಕೊಳ್ಳಬಹುದು. ಪ್ರಸ್ತುತ ಸಂದರ್ಭದಲ್ಲಿ ಕೋರೋನಾದಿಂದ ಮರಣ ಹೊಂದಿದ ವ್ಯಕ್ತಿಗಳ ಮೃತದೇಹವನ್ನು ಪ್ರಾಣಿಗಳಂತೆ ಹೂಳುತ್ತಿದ್ದರು, ಈ ಸಂಧರ್ಭದಲ್ಲಿ ಸರ್ಕಾರಗಳ ಪ್ರೋಟೋಕಾಲ್ ಅನುಸರಿಸಿ ಮಾದರಿ ರೀತಿಯಲ್ಲಿ ಗೌರಯುತವಾಗಿ ದಫನಕಾರ್ಯವನ್ನು ಮಾಡುತ್ತಿದ್ದೇವೆ. ದೇಶದಲ್ಲಿ ಸುಮಾರು 980 ಕ್ಕಿಂತಲೂ ಅಧಿಕ ಮೃತದೇಹವನ್ನು ದಫನ ಮಾಡಿದ ಹೆಮ್ಮೆ ನಮ್ಮ ಸಂಘಟನೆಗಿದೆ. ಕೋವಿಡ್ ಸಂದರ್ಭದಲ್ಲಿ ದೇಶಾದ್ಯಂತ ಕೋಟಿಗಳ ಮೌಲ್ಯದಲ್ಲಿ ಅರ್ಹರಿಗೆ ಅಗತ್ಯ ಕಿಟ್ ಗಳನ್ನು ವಿತರಿಸಿದ್ದೇವೆ. ನಮ್ಮ ಸಂಘಟನೆಯು ಸಮಯಕ್ಕೆ ತಕ್ಕಂತೆ ಕೆಲಸಕಾರ್ಯಗಳನ್ನು ವಿಸ್ತರಿಸುತ್ತದೆ ಎಂದು ಸಂಘಟನಾ ಕಾರ್ಯವೈಖರಿ ಬಗ್ಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ರವರು ವಿವರಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ನೆಲ್ಯಾಡಿ ಡಿವಿಷನ್ ಅಧ್ಯಕ್ಷರಾದ ಸಿದ್ದೀಕ್ ಮಣ್ಣಗುಂಡಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ತಾಲ್ಲೂಕು ಕಾರ್ಯದರ್ಶಿ ರಫೀಕ್ ನೆಲ್ಯಾಡಿ, ಹಾಗೂ ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷರಾದ ರಫೀಕ್ ಸೀಗಲ್ ರವರು ಉಪಸ್ಥಿತರಿದ್ದರು.

ನವಾಝ್ ಕೋಲ್ಪೆ ಕಾರ್ಯಕ್ರಮವನ್ನು ನಿರೂಪಿಸಿ ಮರ್ಝುಕ್ ಕೋಲ್ಪೆ ಕಾರ್ಯಕ್ರಮವನ್ನು ವಂದಿಸಿದರು.

error: Content is protected !! Not allowed copy content from janadhvani.com