janadhvani

Kannada Online News Paper

ಶುಭ ಸುದ್ಧಿ: ಅವಧಿ ಮೀರಿದ “ರೀ ಎಂಟ್ರಿ” ವಿಸ್ತರಿಸಲಾಗುವುದು- ಜವಾಝಾತ್

ರಿಯಾದ್: ಅಂತಾರಾಷ್ಟ್ರೀಯ ವಿಮಾನ ರದ್ದಾದ ಕಾರಣ ಊರಿಗೆ ತೆರಳಿ ಸೌದಿಗೆ ಮರಳಲು ಸಾಧ್ಯವಾಗದೆ ಉಳಿದಿರುವವರಿಗೆ ಜವಾಝಾತ್ ನಿಂದ ಶುಭ ಸುದ್ದಿ.

ಅವಧಿ ಮೀರಿದ ರೀ ಎಂಟ್ರಿ ವಿಸಾ ಕಾಲಾವಧಿಯನ್ನು ವಿಸ್ತರಿಸಿ ನೀಡಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಜವಾಝಾತ್ ಹೇಳಿದೆ. ಇದರೊಂದಿಗೆ, ವಿಮಾನ ಸೇವೆ ಪ್ರಾರಂಭವಾದ ನಂತರ ಸೌದಿ ಅರೇಬಿಯಾಕ್ಕೆ ಮರಳಬಹುದಾಗಿದೆ.

ಕಂಪನಿಗಳ ಮುಖೀಮ್ ಪೋರ್ಟಲ್ ಮೂಲಕವೂ ರೀ ಎಂಟ್ರಿಯನ್ನು ವಿಸ್ತರಿಸಬಹುದು. ಈ ಸೌಲಭ್ಯ ಇಲ್ಲದವರಿಗೆ ರೀ ಎಂಟ್ರಿಯನ್ನು ಜವಾಝಾತ್ ವಿಸ್ತರಿಸಿ ನೀಡಲಿದೆ.

ನಿರ್ಗಮನ ವೀಸಾಗಳ ಅವಧಿ ಮುಗಿದವರ ಮಾನ್ಯತೆಯನ್ನು ವಿಸ್ತರಿಸುವುದಾಗಿ ಸೌದಿ ಜಾವಾಸತ್ ಘೋಷಿಸಿದೆ. ಇದಕ್ಕಾಗಿ ಕ್ರಮಗಳು ಪ್ರಗತಿಯಲ್ಲಿವೆ. ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಜವಾಝಾತ್ ಇದನ್ನು ವ್ಯಕ್ತಪಡಿಸಿದೆ.

error: Content is protected !! Not allowed copy content from janadhvani.com