janadhvani

Kannada Online News Paper

ಪ್ರೊ.ಎಸ್ ಅಬ್ದುರ್ರಹ್ಮಾನ್ ಇಂಜಿನಿಯರ್: ಸುನ್ನಿ ವಿದ್ಯಾರ್ಥಿ ಚಳುವಳಿಯನ್ನು ಕನ್ನಡ ಮಣ್ಣಲ್ಲಿ ಬಿತ್ತಿ ಬೆಳೆಸಿದವರು

ಸುನ್ನಿ ವಿದ್ಯಾರ್ಥಿ ಚಳುವಳಿಯನ್ನು ಕರ್ನಾಟಕದ ಮಣ್ಣಲ್ಲಿ ಬಿತ್ತಿ ಬೆಳೆಸಿದ ಪ್ರಮುಖರಲ್ಲಿ ಓರ್ವರು

ಇಸ್ಲಾಮಿನ ತಾತ್ವಿಕ ಪರಂಪರೆಯಲ್ಲಿ ಗಟ್ಟಿಯಾಗಿ ನಿಲ್ಲುವ ಸುಸಂಸ್ಕೃತ ಹೊಸ ತಲೆಮಾರನ್ನು ಬೆಳೆಸುವ ಮಹತ್ತರ ಗುರಿಯೊಂದಿಗೆ ಸಾತ್ವಿಕರ ಸಾರಥ್ಯದಲ್ಲಿ ಹುಟ್ಟಿದ ಸುನ್ನಿಯುವ ಚಳುವಳಿಗೆ ಸಾಥ್ ಕೊಟ್ಟವರು.

ಆರಂಭಿಕ‌ ಘಟ್ಟದಲ್ಲಿ ಸಾಗಬೇಕಾಗಿ ಬಂದಿದ್ದು ದುರ್ಗಮ ಹಾದಿಯಾಗಿತ್ತು. ಅದೆಲ್ಲವನ್ನು ದಾಟಿ ನಮ್ಮ ತನಕ ಚಳುವಳಿಯನ್ನು ತಲುಪಿಸಿಕೊಟ್ಟ ಎಸ್.ಅಬ್ದರ್ರಹ್ಮಾನ್ ಇಂಜಿನಿಯರ್ ಗೆ ನಾವೆಲ್ಲಾ ಋಣಿ. ಅವರ ವಿಯೋಗದಿಂದ ಸಮುದಾಯವು ಶಿಕ್ಷಣ ತಜ್ಞ ಸಂಘಟಕನೋರ್ವನನ್ನು ಕಳೆದುಕೊಂಡಿದೆ. ಅವರ ಪಾರತ್ರಿಕ ವಿಜಯಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಅಲ್ಲಾಹನು ಕರುಣಿಸಲಿ.

ಕರ್ನಾಟಕ ಎಸ್ಸೆಸ್ಸೆಫ್ ನ ಆರಂಭ ಕಾಲದ ಜನರಲ್ ಸೆಕ್ರೆಟರಿಯಾಗಿದ್ದ, ಎಸ್‌ವೈಎಸ್, ಮುಸ್ಲಿಮ್ ಜಮಾತ್ ಮುಂತಾದ ಸಂಘಟನೆಯ ಮೇಲ್ಪಂಕ್ತಿಯಲ್ಲಿ ನಿಂತು ಸಮುದಾಯದ ಸೇವೆ ಮಾಡಿದ್ದ ಎಸ್. ಅಬ್ದುರ್ರಹ್ಮಾನ್ ಇಂಜಿನಿಯರ್ ಗಾಗಿ ಎಲ್ಲ ಶಾಖಾ ಮಟ್ಟದಲ್ಲಿ ವಿಶೇಷ ದುಆ ಮಜ್ಲಿಸ್ ಏರ್ಪಡಿಸಿ. ಎಲ್ಲ ಮಸೀದಿಗಳಲ್ಲಿ ಅವರಿಗಾಗಿ ಮಯ್ಯಿತ್ ನಮಾಝ್ ನಿರ್ವಹಿಸಲು ಮನವಿ ಮಾಡುತ್ತಿದ್ದೇನೆ.

✍️ಸಿಟಿಎಂ ಉಮರ್ ಅಸ್ಸಖಾಫ್ ಮದನಿ
(ರಾಜ್ಯಾಧ್ಯಕ್ಷರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)


ಎಸ್.ಅಬ್ದುರ್ರಹ್ಮಾನ್ ಅಗಲುವಿಕೆ:
ಸುನ್ನತ್ ಜಮಾಅತ್’ಗೆ ತುಂಬಲಾರದ ನಷ್ಟ- ಮಲ್ಲೂರು ಸಅದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುನ್ನೀ ಸಂಘಟನೆಯ ಉದ್ಬವಕ್ಕೆ ಕಾರಣೀಕರ್ತರಲ್ಲೋರ್ವರಾದ, ಬಹುಭಾಷಾ ಪಂಡಿತ, ಧೀಮಂತ ನಾಯಕ, ಅದ್ವೀತೀಯ ಭಾಷಣಗಾರ, ಖ್ಯಾತ ಚಿಂತಕ *ಇಂಜಿನಿಯರ್ ಎಸ್.ಅಬ್ದುರ್ರಹ್ಮಾನ್* ಅಕಾಲಿಕವಾಗಿ ನಮ್ಮನ್ನಗಲಿದ್ದು ಸುನ್ನತ್ ಜಮಾಅತಿಗೆ ತುಂಬಲಾರದ ನಷ್ಟವಾಗಿದೆ ಎಂದು ಅಸಾಸ್ ಅಧ್ಯಕ್ಷ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ವಿಶ್ಲೇಷಿದರು.

ಎಸ್ಸೆಸ್ಸೆಫ್ ಎಸ್.ವೈ.ಎಸ್. ಹಾಗೂ ಸುನ್ನೀ ಸಂಘಟನೆಗಾಗಿ ಹಗಲಿರುಳು ದುಡಿದ ಅವರು ಸುನ್ನಿಗಳಿಗೆ ಮಾದರೀ ನಾಯಕರಾಗಿದ್ದರು.

ಬಹಳ ಉತ್ಸಾಹದೊಂದಿಗೆ ಕಾರ್ಯಾಚರಿಸುತ್ತಿದ್ದ ಅವರು ಸರಳ ವ್ಯಕ್ತಿತ್ವದ ಒಡೆಯರಾಗಿದ್ದರು.

ಉತ್ತಮ ಸ್ವಭಾವ ಗುಣವನ್ನು ಹೊಂದಿದ ಅವರು ವಿಧ್ಯಾವಂತ ವ್ಯಕ್ತಿಗಳಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ಅತ್ಯಂತ ವಿನಯಾನ್ವಿತ ಸಾಧಕರಾಗಿದ್ದರು.

ಒಟ್ಟಿನಲ್ಲಿ ಸುನ್ನೀ ಕಾರ್ಯಕರ್ತರಲ್ಲಿ ಆವೇಶ ಮೂಡಿಸುತ್ತಿದ್ದ ಅವರ ಕಾರ್ಯಾಚರಣೆ ಹಾಗೂ ಭಾಷಣ ಅದೆಷ್ಟೋ ಬದಲಾವಣೆಯನ್ನು ನೀಡಿದ್ದು ಸುಳ್ಳಲ್ಲ.

ನನ್ನನ್ನೂ ಅಸಾಸ್ ಸಂಸ್ಥೆಯನ್ನು ಆಳವಾಗಿ ಪ್ರೀತಿಸುತ್ತಿದ್ದ ಆವರು ಹಲವಾರು ನಿರ್ಧೇಶನಗಳನ್ನು ನೀಡುತ್ತಿದ್ದರು.

ಅಸಾಸ್ ಸಂಸ್ಥೆಯ ಪ್ರಾರಂಭ ಕಾಲದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆಯೇ ಹಲವಾರು ತರಗತಿಗಳನ್ನು ನಡೆಸಿಕೊಡುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಬುನಾದಿ ಹಾಕಿಕೊಟ್ಟಿದ್ದರು.

ಅವರಿಗಾಗಿ ಎಲ್ಲಾ ಸುನ್ನೀ ನಾಯಕರು ಕಾರ್ಯಕರ್ತರು ಅಭಿಮಾನಿಗಳು ಸಾಧ್ಯವಾದಷ್ಟು ತಹ್ಲೀಲ್ ಹೇಳಿಯೂ ಯಾಸೀನ್ ಓದಿಯೂ ಖತಂ ಮುಗಿಸಿಯೂ ಹದಿಯಾ ಮಾಡಬೇಕಾಗಿದೆ.

ಅಲ್ಲಾಹನು ಅವರ ಖಬರ್ ಜೀವನವೂ ಪರಲೋಕ ಜೀವನವೂ ಹಸನುಗೊಳಿಸಲಿ..
ಸ್ವರ್ಗಲೋಕದಲ್ಲಿ ಅವರನ್ನೂ ನಮ್ಮನ್ನೂ ಪ್ರವಾದಿ ಪುಂಗಾವರೊಂದಿಗೆ ಒಟ್ಟು ಸೇರಿಸಲಿ..
ಆಮೀನ್.

error: Content is protected !! Not allowed copy content from janadhvani.com