janadhvani

Kannada Online News Paper

ಕುಲಾಲು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

ಬಂಟ್ವಾಳ : ಕುಲಾಲು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಜಮಾಅತ್ ಅಧ್ಯಕ್ಷರಾದ ಬಹು:ಅಹ್ಮದ್ ರವರು ಧ್ವಜಾರೋಹಣ ನೆರವೇರಿಸಿದರು. ಜಮಾಅತ್ ಖತೀಬರಾದ ಮಸ್ಊದ್ ಸಅದಿ ಪ್ರಾರ್ಥನೆ ನಿರ್ವಹಿಸಿ ಬಳಿಕ ಸಂದೇಶ ಭಾಷಣ ಮಾಡಿ 74 ನೇ ಸ್ವಾತಂತ್ರ್ಯ ದಿನಾಚರಣೆ ಇದು ಪೂರ್ವಜರ ತ್ಯಾಗ ದ ಫಲ ಎಂದರು .

ಜುನೈದ್ ರಝಾ ಅಝ್ಹರಿ ಶುಭಕೋರಿ ಮಾತನಾಡಿದರು . ಜಮಾಅತ್ ಪ್ರ. ಕಾರ್ಯದರ್ಶಿ ಕರೀಂ ಕುಲಾಲು, ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕುಲಾಲು, SSF ಕುಲಾಲು ಯುನಿಟ್ ಅಧ್ಯಕ್ಷ ರಶೀದ್ ಮುಸ್ಲಿಯಾರ್, ಕಾರ್ಯದರ್ಶಿ ಹುಸೈನ್, ರಝಾಕ್ ಹನೀಫಿ ಅಹ್ಮದ್, ಅಬ್ದುಲ್ಲಾ ಕುಲಾಲು ಉಪಸ್ಥಿತರಿದ್ದರು. ರಶೀದ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ತಿಳಿಸಿದರು.

error: Content is protected !! Not allowed copy content from janadhvani.com