janadhvani

Kannada Online News Paper

ಮಂಗಳೂರು: ಮಹಾನ್ ಮಾನವತಾವಾದಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಜೀವನ ಸಂದೇಶ ಪ್ರತಿ ಕಾಲಕ್ಕೂ ಪ್ರತಿಯೊಂದು ಸಮಾಜಕ್ಕೂ ಸಾರ್ವಕಾಲಿಕ. ಅವರ ಪ್ರತಿಯೊಂದು ನಡೆನುಡಿಗಳು ಜಗತ್ತಿಗೆ ಶಾಂತಿಯ, ಪ್ರೀತಿಯ, ಸಹಬಾಳ್ವೆಯ ಪ್ರಸಕ್ತನೀಯ ಸಂದೇಶ. ಅವರ ಅನುಪಮ ಜೀವನ ದರ್ಶನವನ್ನು ಅಧ್ಯಯನ ಮಾಡಿದ ನೂರಾರು ಬುದ್ಧಿ ಜೀವಿಗಳು ಅವರ ಸತ್ಯ ಸಂದೇಶಗಳಿಗೆ ಆಕರ್ಶಿತರಾಗಿ ಹಾಡಿ ಹೊಗಳಿದ್ದಾರೆ.

ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡವಿ ವಿಕೃತ ಆನಂದ ಪಡೆದು ಕುಖ್ಯಾತಿ ಗಳಿಸುವ ಕೆಲವರ ಕುತಂತ್ರ ಖಂಡನೀಯ.
ಸಮಾಜದ ಸೌಹಾರ್ದತೆ, ಸಹಬಾಳ್ವೆಗೆ ಕೊಡಲಿಯೇಟು ಕೊಟ್ಟು ಹಿಂಸೆಯನ್ನು ಪ್ರಚೋದಿಸಿ ತೋಚಿದ್ದು ಗೀಚುವ ಸಮಾಜ ಘಾತುಕರಿಗೆ ಕಾನೂನು ಕ್ರಮದಲ್ಲಿ ಗರಿಷ್ಟ ಮಟ್ಟದ ಶಿಕ್ಷೆಯಾಗಬೇಕು. ಇಂತಹ ದುಷ್ಕೃತ್ಯಗಳು ಮತ್ತೆ ಮರುಕಳಿಸದಂತೆ ಸರ್ಕಾರ ನಿಗಾ ವಹಿಸಬೇಕು.

ಆತೂರು ಸಅದ್ ಮುಸ್ಲಿಯಾರ್ (ಅಧ್ಯಕ್ಷರು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ)

error: Content is protected !!
%d bloggers like this: