janadhvani

Kannada Online News Paper

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ವ್ಯಾಪ್ತಿಯ ಉಚಿತ ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನದ ಉದ್ಘಾಟನೆಯು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಹಭಾಗಿತ್ವದೊಂದಿಗೆ ಕಲ್ಲುಗುಂಡಿ ಸೊಸೈಟಿಯಲ್ಲಿ ಆಗಸ್ಟ್ 13, ಗುರುವಾರದಂದು ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ಶಿಬಿರವನ್ನು ಉದ್ಘಾಟಿಸಿ ಸಂಘಟನೆಯು ಹಮ್ಮಿಕೊಳ್ಳುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸ್ವಬಾಹ್ ಹಿಮಮಿ ಸಖಾಫಿ ಮುನ್ನುಡಿ ಭಾಷಣಗೈದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಉಪಾಧ್ಯಕ್ಷರಾದ ಎ.ಮುಹಮ್ಮದ್ ಫೈಝಲ್ ಝುಹ್’ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ
ಕೆ.ಪಿ. ಜೋನಿ (ತಾಲೂಕು ಅಧ್ಯಕ್ಷರು, ಸಿಐಟಿಯು), ವೀರೇಂದ್ರ ಕುಮಾರ್ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಲಿಮಿಟೆಡ್), ಕಮಾಲ್ ಕಡಬ (ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮಾಹಿತಿ ಅಧಿಕಾರಿ), ಗಣಪತಿ ಭಟ್ (ನಿರ್ದೇಶಕರು, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಲಿಮಿಟೆಡ್), ಕಿಶೋರ್ ಕುಮಾರ್ (ಮಾಲಕರು, ಸ್ಪಾಟ್ ಕಂಪ್ಯೂಟರ್ ಕಲ್ಲುಗುಂಡಿ), ಜಿ.ಕೆ.ಹಮೀದ್ ಗೂನಡ್ಕ (ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಸಂಪಾಜೆ) ಮುಂತಾದವರು ಭಾಗವಹಿಸಿ ಶುಭಹಾರೈಸಿದರು.

ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಕಬೀರ್ ಜಟ್ಟಿಪಳ್ಳ, ರಶೀದ್ ಜಟ್ಟಿಪಳ್ಳ, ಸಿದ್ದೀಖ್ ಗೂನಡ್ಕ, ಅಬ್ದುಲ್ ಕಾದರ್ ಸಂಗಂ, ಜುನೈದ್ ಚಟ್ಟೆಕಲ್ಲು, ಜುನೈದ್ ಸಂಪಾಜೆ, ಫಯಾಝ್ ನೆಲ್ಲಿಕುಮೇರಿ, ನೌಫಲ್ ಕಲ್ಲುಗುಂಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವಾದಿಖ್ ಕಲ್ಲುಗುಂಡಿ ಸ್ವಾಗತಿಸಿ, ವಂದಿಸಿದರು.

error: Content is protected !!
%d bloggers like this: