ಬೆಳ್ತಂಗಡಿ: 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಯಲದ ವಿದ್ಯಾರ್ಥಿ, ಕಳಂಜಿಬೈಲ್ ಇಬ್ರಾಹಿಂ ಮತ್ತು ಬುಶ್ರಾ ದಂಪತಿಗಳ ಪುತ್ರ, ಎಸ್ಸೆಸ್ಸೆಫ್ ಕಳಂಜಿಬೈಲ್ ಯುನಿಟ್ ಸದಸ್ಯ ಮುಹಮ್ಮದ್ ಶಾಹಿರ್ 595 ಅಂಕ ಮತ್ತು ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ, ದಾಸಲಿಕೆ ಇಸ್ಮಾಯಿಲ್ ಮತ್ತು ಅವ್ವಮ್ಮ ದಂಪತಿಗಳ ಪುತ್ರ ಮುಹಮ್ಮದ್ ಸಾಜಿದ್ 555 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಮತ್ತು ತಬ್ಸೀರ 487, ಕೆ.ಹೆಚ್ ಶಾಹಿನ ಬಾನು 463, ಸಂಶುನ್ನಿಸಾ 426 ಹಾಗೂ ಕಳೆದ ತಿಂಗಳಲ್ಲಿ ಬಂದ ಪಿಯುಸಿ ಫಲಿತಾಂಶದಲ್ಲಿ ಪುಂಜಾಲಕಟ್ಟೆ ಸರಕಾರಿ ಕಾಲೇಜು ವಿಧ್ಯಾರ್ಥಿನಿ, ಎಸ್.ವೈ.ಎಸ್ ಕಳಂಜಿಬೈಲ್ ಬ್ರಾಂಚ್ ಸದಸ್ಯ ಉಸ್ಮಾನ್ ಮತ್ತು ಆಯಿಶ ದಂಪತಿಗಳ ಪುತ್ರಿ ಅಫೀಫಾ ಬಾನು 559 ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆದು ತೇರ್ಗಡೆಯಾಗಿ ಮತ್ತು ಶಾಹಿನ 460, ಅಶ್ಫಿಯಾ 425, ಸಾದಿಕ್ 403, ನೌಶಾದ್ 400 ಹಾಗೂ ಇತರ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತೀರ್ಣರಾಗಿದ್ದಾರೆ. ಇವರ ಸಾಧನೆಗೆ ಕಳಂಜಿಬೈಲ್ ಜಮಾಅತರ ಹಾಗೂ ಎಸ್.ವೈ.ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರ ಪ್ರಶಂಸೆಗೆ ಪಾತ್ರರಾದರು. ಇವರನ್ನು ಎಸ್ಸೆಸ್ಸೆಫ್ ಕಳಂಜಿಬೈಲ್ ಶಾಖೆ ಅಭಿನಂದಿಸುತ್ತಿದೆ.