janadhvani

Kannada Online News Paper

ಸೀಕೋ ಸುನ್ನ:20 ಭಾಗ -2 ಪರೀಕ್ಷೆ ಫಲಿತಾಂಶ ನಾಳೆ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ರಾಜ್ಯದಾದ್ಯಂತ ವಿರುವ ಕಾರ್ಯಕರ್ತರಿಗೆ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶಗಳ ಕಲಿಕೆಗಾಗಿ ಹಮ್ಮಿಕೊಂಡ ಸೀಕೋ ಸುನ್ನ ಇದರ ಎರಡನೇ ಭಾಗದ ಪರೀಕ್ಷೆ ಮುಗಿದಿದ್ದು ದಿನಾಂಕ 9/8/20 ಆದಿತ್ಯವಾರ ಪೂರ್ವಾಹ್ನ 11 ಘಂಟೆಗೆ ಫಲಿತಾಂಶವನ್ನು ಎಸ್ಸೆಸ್ಸೆಫ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಈ ಪ್ರಯುಕ್ತ ಫಲಿತಾಂಶ ಘೋಷಣ ಕಾರ್ಯಕ್ರಮವನ್ನು ಝೂಮ್ ಮತ್ತು ಯೂಟೂಬ್ ನಲ್ಲಿ ನೇರವಾಗಿ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ಅಧ್ಯಕ್ಷತೆಯಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ಚೇರ್ ಮಾನ್ ಡಾಕ್ಟರ್ ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಕಾಮಿಲ್ ಉದ್ಘಾಟಿಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಕ್ಯಾಬಿನೆಟ್ ನಾಯಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಮುತಅಲ್ಲಿಂ ಮತ್ತು ಜನರಲ್ ವಿಭಾಗದ ಅಭ್ಯರ್ಥಿಗಳನ್ನು ಮತ್ತು ಶೇಖಡ 65ಕ್ಕಿಂತ ಹೆಚ್ಚಿನ ಮಾರ್ಕ್ ಪಡೆದ ಶಾಖೆಗಳಲ್ಲಿ ತಲಾ ಮೂರರನ್ನು ಟೋಪರ್ ಗಳಾಗಿ ಘೋಷಿಸಲಾಗುತ್ತದೆ ಮತ್ತು ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಗುತ್ತದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸೀಕೋ ಸುನ್ನ ಚೀಫ್ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com