janadhvani

Kannada Online News Paper

ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ: ಆ.10ರಂದು ಮಧ್ಯಾಹ್ನ 3ಕ್ಕೆ ಪ್ರಕಟ

ಬೆಂಗಳೂರು : ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ಒಮ್ಮೆ ಫಲಿತಾಂಶ ಪ್ರಕಟವಾದ ನಂತರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಲಿದೆ.

ಆದರೆ, ಏಕಕಾಲಕ್ಕೆ ಎಲ್ಲರೂ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಲು ಲಾಗಿನ್ ಆಗುವುದರಿಂದ ಸೆರವರ್ ಸಯಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೇರೆ ಬೇರೆ ವೆಬ್ಸೈಟ್ಗಳಲ್ಲೂ ಫಲಿತಾಂಶ ವೀಕ್ಷಿಸಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕರ್ನಾಟಕದಲ್ಲಿ ಈ ವರ್ಷ ಸುಮಾರು 8.40 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಕಳೆದ ತಿಂಗಳು ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಜುಲೈ 3ರಂದು ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದಿತ್ತು. ಈಗಾಗಲೇ ಮೌಲ್ಯಮಾಪನ ಮುಕ್ತಾಯವಾಗಿದೆ. ಹೀಗಾಗಿ, ಈ ವಾರದಲ್ಲೇ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿತ್ತು. ಆದರೆ, ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಫೇಸ್ಬುಕ್ನಲ್ಲಿ ಮಾಹಿತಿ ನೀಡಿದ್ದು, ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದಿದ್ದಾರೆ.

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್ಸೈಟ್ನಲ್ಲಿ ಕೂಡ ರಿಸಲ್ಟ್ ನೋಡಬಹುದು.

examresults.net ವೆಬ್ಸೈಟ್ನಲ್ಲಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಲು ಇಲ್ಲಿದೆ ಸುಲಭ ವಿಧಾನ.

ಮೊದಲು examresults.net ವೆಬ್ಸೈಟ್ಗೆ ಹೋಗಿ.

ಹೋಂ ಪೇಜ್ನಲ್ಲಿ ಎಸ್ಎಸ್ಎಲ್ಸಿ ರಿಸಲ್ಟ್ 2020 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅಥವಾ ಹೋಂ ಪೇಜ್ನಲ್ಲಿರುವ Karnataka ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈ ಪೇಜ್ನಲ್ಲಿ Karnataka SSLC Exam ಎಂಬ ಆಯ್ಕೆ ಇರುತ್ತದೆ.

ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೇಳುವ ನಿಮ್ಮ ಮಾಹಿತಿಯನ್ನು ಪೂರ್ತಿ ಮಾಡಿದರೆ ನಿಮ್ಮ ಫಲಿತಾಂಶ ಸಿಗುತ್ತದೆ.

indiaresults.com ವೆಬ್ಸೈಟ್ನಲ್ಲಿ ನಿಮ್ಮ ಫಲಿತಾಂಶವನ್ನು ನೋಡುವ ವಿಧಾನ ಹೀಗಿದೆ..

indiaresults.com ವೆಬ್ಸೈಟ್ಗೆ ಹೋಗಿ.

ಅಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕವನ್ನು ಆಯ್ಕೆ ಮಾಡಿಕೊಳ್ಳಿ. ಹಾಗೇ karnataka.indiaresults.com ಎಂದು ಟೈಪ್ ಮಾಡಿ ಎಂಟರ್ ಬಟನ್ ಒತ್ತಿ.

ಅಲ್ಲಿ ಕರ್ನಾಟಕ ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್ ಎಂಬ ಆಯ್ಕೆ ಇರುತ್ತದೆ. ಅದರ ಜೊತೆಗೆ ಕರ್ನಾಟಕ ಎಸ್ಎಸ್ಎಲ್ಸಿ ರಿಸಲ್ಟ್ 2020 ಎಂಬ ಆಯ್ಕೆ ಇರುತ್ತದೆ.

ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ವಿವರಗಳನ್ನು ತುಂಬಿದರೆ ರಿಸಲ್ಟ್ ಸಿಗುತ್ತದೆ.

kseeb.kar.nic.in ಅಥವಾ karresults.nic.in ವೆಬ್ಸೈಟ್ನಲ್ಲಿ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ.

ವೆಬ್ಸೈಟ್ ಓಪನ್ ಮಾಡಿ ನಂತರ ಹೋಂ ಪೇಜ್ನಲ್ಲಿ ಎಸ್ಎಸ್ಎಲ್ಸಿ ರಿಸಲ್ಟ್ ಎಂಬ ಆಯ್ಕೆಯನ್ನು ಒತ್ತಿ.

ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.

ಹಾಲ್ ಟಿಕೆಟ್ನ ಮಾಹಿತಿಯನ್ನು ವೆಬ್ಸೈಟ್ನಲ್ಲಿ ವೇರಿಫೈ ಮಾಡಿಕೊಳ್ಳಿ.

ಆಗ ನಿಮ್ಮ ಪರೀಕ್ಷೆ ಫಲಿತಾಂಶ ಸಿಗುತ್ತದೆ.

ನಂತರ ಆ ಫಲಿತಾಂಶವನ್ನು ಪಿಡಿಎಫ್ ಫಾರ್ಮಾಟ್ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ. ಹಾಗೇ, ಒಂದು ಕಾಪಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

error: Content is protected !! Not allowed copy content from janadhvani.com