janadhvani

Kannada Online News Paper

ವಕ್ಫ್ ಬೋರ್ಡ್ ರಾಜ್ಯಾದ್ಯಕ್ಷ ಡಾ.ಮುಹಮ್ಮದ್ ಯೂಸುಫ್ ನಿಧನ

ಬೆಂಗಳೂರು: ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯ ಅದ್ಯಕ್ಷ, ಮುಸ್ಲಿಂ ಸಮಾಜದ ನಾಯಕ ಜನಾಬ್ ಡಾ.ಮುಹಮ್ಮದ್ ಯೂಸುಫ್ ರವರು ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಸುಕಿನ 3 ಗಂಟೆಗೆ ನಿಧನರಾದರು.

ದಫನ ಕಾರ್ಯ ಬೆಂಗಳೂರಿನ ಗೋವಿಂದಪುರದಲ್ಲಿರುವ ಅವರೇ ನಿರ್ಮಿಸಿದ ಮುಝಮ್ಮಿಲ್ ಮಸೀದಿಯ ಕಬರ್‌ಸ್ಥಾನದಲ್ಲಿ ನಡೆಯಲಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ ಶಾಫಿ ಸಅದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com