janadhvani

Kannada Online News Paper

ವಿಶ್ವವಿದ್ಯಾನಿಲಯ ಕೊಣಾಜೆ: ಪ್ರಥಮ ದರ್ಜೆ ಕಾಲೇಜ್ ಮುಂದುವರಿಕೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಕ್ಯಾಂಪಸ್‌ನ ಪ್ರಥಮ ದರ್ಜೆ ಕಾಲೇಜನ್ನು ಮುಂದುವರಿಸಲು ತೀರ್ಮಾನಿಸಲಾಗಿದ್ದು, ಈ ವರ್ಷವೂ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.

ಸರಕಾರದ ಅನು ಮೋದನೆ ಇಲ್ಲದಿರುವುದು ಹಾಗೂ ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಈ ಕಾಲೇಜನ್ನು ಬಂದ್‌ ಮಾಡಲು ಉದ್ದೇಶಿಸಿಸಲಾಗಿತ್ತು. ಕಾಲೇಜನ್ನು ಬಂದ್‌ ಮಾಡದಂತೆ ಸಾಮಾಜಿಕ ಮುಖಂಡರ ಸಹಿತ ಹಲವರು ಸರಕಾರವನ್ನು ಆಗ್ರಹಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರು, “ಕೊಣಾಜೆಯ ಪ್ರ.ದ. ಕಾಲೇಜು ಬಂದ್‌ ಮಾಡುವ ಬಗ್ಗೆ ವಿ.ವಿ. ಈ ಹಿಂದೆ ಯೋಚಿಸಿತ್ತು. ಆದರೆ ಕೊರೊನಾ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳು-ಪೋಷಕರಿಗೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ಈ ವರ್ಷ ಕಾಲೇಜು ಬಂದ್‌ ಮಾಡುವುದು ಬೇಡ ಎಂಬ ತೀರ್ಮಾನವನ್ನು ವಿ.ವಿ. ಸಿಂಡಿಕೇಟ್‌ ಸಭೆ ತೀರ್ಮಾನಿಸಿದೆ. ಸರಕಾರಕ್ಕೆ ಈ ಸಂಬಂಧ ಪತ್ರವನ್ನೂ ಬರೆಯಲಾಗಿದೆ. ಬಂದ್‌ ಮಾಡದಂತೆ ಉನ್ನತ ಶಿಕ್ಷಣ ಸಚಿವರು ಕೂಡ ದೂರವಾಣಿ ಮೂಲಕ ಸೂಚಿಸಿದ್ದಾರೆ. ಸರಕಾರದಿಂದ ಅಧಿಕೃತ ಪ್ರಕಟನೆ ಇನ್ನಷ್ಟೇ ಬರಬೇಕಿದೆ. ಇದೀಗ ವಿದ್ಯಾರ್ಥಿಗಳ ಸೇರ್ಪಡೆ ಆರಂಭಿಸಲಾಗಿದೆ” ಎಂದರು.

error: Content is protected !! Not allowed copy content from janadhvani.com