janadhvani

Kannada Online News Paper

ಜಿಲ್ಲಾಧಿಕಾರಿ ವರ್ಗಾವಣೆ: ಸರ್ಕಾರದ ಬೇಜವಾಬ್ದಾರಿತನ- ಮುಸ್ಲಿಂ ಲೀಗ್

ಮಂಗಳೂರು: ದ.ಕ.ಜಿಲ್ಲಾಧಿಕಾರಿಯವರು ಸಂಕಷ್ಟದ ಸಮಯದಲ್ಲಿಯೂ ತನ್ನ ಕಾರ್ಯನಿರ್ವಹಣೆಯಲ್ಲಿ ಕಾರ್ಯಕ್ಷಮತೆಯನ್ನು ತೋರಿಸಿ ಜಿಲ್ಲೆಯ ಜನರ ಮನಸ್ಸನ್ನು ಗೆದ್ದವರಾಗಿದ್ದಾರೆ.

ಸಮಾಜದ ಎಲ್ಲಾ ವರ್ಗ ದ ಜನರೊಂದಿಗೆ ಬೆರೆತು ಒಬ್ಬ ಮಹಿಳಾ ಅಧಿಕಾರಿಯಾಗಿ ಜಿಲ್ಲೆಯ ಸಾಮರಸ್ಯವನ್ನು ಉಳಿಸುವುದರಲ್ಲಿ ಪ್ರಾಮಾಣಿಕತೆ ಮೆರೆದ ಕೀರ್ತಿಗೆ ಪಾತ್ರರಾಗಿದ್ದರು ದಿಟ್ಟ ಅಧಿಕಾರಿಯಾಗಿದ್ದ ಸಿಂದೂ ರೂಪೇಶ್ ರವರು.

ಮಾದರೀ ಯೋಗ್ಯರಾದ ಅಧಿಕಾರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿ ಧೈರ್ಯ ನೀಡುವ ಬದಲು ಗೋವಿನ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡು ಅಮಾಯಕರಿಗೆ ಹಲ್ಲೆ ಮಾಡಿ ಸಮಾಜದ ಸ್ವಾಸ್ಥಕೆಡಿಸುವ ಪುಂಡರನ್ನು ತೃಪ್ತಿ ಪಡಿಸಲು ಸರಕಾರ ವರ್ಗಾವಣೆ ಮಾಡಿದೆ.
ಆ ಮೂಲಕ ಸಮಾಜದ ಹಿತವನ್ನು ಬಲಿಕೊಟ್ಟು ತನ್ನ ಗುಣ ಏನೆಂದು ಸರಕಾರ ರಾಜ್ಯಕ್ಕೆ ತೋರಿಸಿ ಕೊಟ್ಟಿದೆ. ದ.ಕ.ಜಿಲ್ಲೆಯಲ್ಲಿ ಸಾಮರಸ್ಯ ಮತ್ತು ಪ್ರಾಮಾಣಿಕತೆಯನ್ನು ಬಯಸದ ರಾಜಕಾರಣಿಗಳ ಕೈವಾಡ ಇದರಿಂದ ಬಯಲಾಗಿದೆ‌.

ಸರಕಾರದ ದುರುದ್ದೇಶ ಮತ್ತು ಬಿಜೆಪಿಗರ ಮನಸ್ಥಿತಿ ಯನ್ನು ರಾಜ್ಯದ ಜನರು ಅರಿತು ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಬೇಕಾಗಿದೆ.

ತಕ್ಷಣ ಜಿಲ್ಲಾಧಿಕಾರಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆದೇಶವನ್ನು ಹಿಂಪಡೆಯಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ತಬೂಕ್ ದಾರಿಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com