ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ
ದಾಖಲಾಗಿದ್ದ ಕೆಸಿರೋಡ್ ತಲಪಾಡಿ ಮತ್ತು ಸುರತ್ಕಲ್ ಬಾಯರ್ಪಳಿಕೆ ವ್ಯಕ್ತಿಗಳು ಮೃತಪಟ್ಟಿದ್ದು, ಮೃತಪಟ್ಟ ವ್ಯಕ್ತಿಯ ಕೊರೋನಾ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಪ್ರತ್ಯೇಕ ತರಗತಿ ಪಡೆದ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸಅದಿ ಹರೇಕಳ ರವರ ನೇತೃತ್ವದ ತಂಡ ಕೆ.ಸಿ.ರೋಡ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಮತ್ತು ಸುರತ್ಕಲ್ ಬಾಯರ್ಪಳಿಕೆ 62ನೇ ತೋಕುರು ದಫನ ಭೂಮಿಯಲ್ಲಿ ಜಿಲ್ಲಾ ನಾಯಕರಾದ ನವಾಝ್ ಸಖಾಫಿ ಅಡ್ಯಾರ್ ರವರ ನೇತೃತ್ವದ ತಂಡ ಧಪನ ಕಾರ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸಿತು.
ದ.ಕ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ದುಆ ನೆರವೇರಿಸಿದರು.ಜಿಲ್ಲಾ ನಾಯಕರಾದ ಆರಿಫ್ ಝುಹ್ರಿ ಮುಕ್ಕ,ಕೆರೀಂ ಕದ್ಕಾರ್, ವೆಸ್ಟ್ ಝೋನ್ ಕಾರ್ಯದರ್ಶಿ ಹೈದರ್ ಕಾಟಿಪಳ್ಳ, ಝೋನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ,ಬ್ಲಡ್ ಸೈಬೊ ಉಳ್ಳಾಲ ಉಸ್ತುವಾರಿ ಅಲ್ತಾಫ್ ಶಾಂತಿಬಾಗ್, ಫೈಝಲ್ ಫರೀದ್ ನಗರ, ಹಮೀದ್ ತಲಪಾಡಿ,ಹಕೀಂ ಪೂಮಣ್ಣು, ನೌಫಲ್ ಫರೀದ್ ನಗರ, ಮುನೀರ್ ಬೈತಾರು, ಅಬೂಸ್ವಾಲಿಹ್ ಫಜೀರ್, ಇಸ್ಮಾಯಿಲ್ ತಲಪಾಡಿ,ಜಬ್ಬಾರ್ ಕಣ್ಣೂರು,ಹುಸೈನ್ ಜೋಕಟ್ಟೆ,ತೌಸೀಫ್ ಬದ್ರಿಯ ನಗರ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಮಸೀದಿಯ ಆಡಳಿತ ಸಮಿತಿ, ಆರೋಗ್ಯ
ಇಲಾಖೆಯ ಅಧಿಕಾರಿಗಳ, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರ ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.
