SSF ರಾಜ್ಯ ಸಮಿತಿಯು ಜಿಲ್ಲೆ ಮತ್ತು ಝೋನ್ ಘಟಕ ಗಳ ಕಾರ್ಯಕಾರಿ ಸಮಿತಿ ಸದಸ್ಯರಿಗಾಗಿ ಹಮ್ಮಿಕೊಂಡ DEAN Online Training
ತರಬೇತಿ ಕಾರ್ಯಾಗಾರಕ್ಕೆ ಸಂಭ್ರಮದ ಚಾಲನೆಯಾಯಿತು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಉಮರ್ ಅಸ್ಸಖಾಫ್ ಮದನಿ ಅವರ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದ ಆರಂಭದಲ್ಲಿ ಆಯೋಜಿಸಲಾಗಿದ್ದ, ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಅನುಸ್ಮರಣಾ ಸಂಗಮದಲ್ಲಿ ಉಸ್ತಾದರ ಸುಪುತ್ರ ಅಲ್ ಮದೀನ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಡೀನ್ ಕುರಿತು ಸಮಗ್ರ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದ ಮೊದಲ ತರಗತಿಯನ್ನು ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡಾಕ್ಟರ್ ಫಾರೂಕ್ ನಈಮಿ ಕೊಲ್ಲಂ ನಡೆಸಿದರು.
ನಿಕಟಪೂರ್ವ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದಿಕ್, ಎಸ್.ವೈ ಎಸ್ ಉಪಾಧ್ಯಕ್ಷರಾದ ಜಿಎಂ ಕಾಮಿಲ್ ಸಖಾಫಿ ,ಕೇರಳ ಎಸ್ಸೆಸ್ಸೆಫ್ ಮಾಜಿ ಕಾರ್ಯದರ್ಶಿಗಳಾದ ಮಜೀದ್ ಅರಿಯಲ್ಲೂರು , ಕಲಾಂ ಮಾವೂರು,ಮುಂತಾದ ಪ್ರಮುಖರು ತರಬೇತಿ ನಡೆಸಲಿದ್ದಾರೆ.
ಜುಲೈ 26 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೂಟಂಬಾರ ಅಬ್ದುರಹ್ಮಾನ್ ದಾರಿಮಿ ತರಗತಿ ನಡೆಸಲಿದ್ದು, ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯಾದ ಶಾಫಿ ಸಅದಿ ಬೆಂಗಳೂರು , SYS ರಾಜ್ಯ ಪ್ರಧಾನ
ಕಾರ್ಯದರ್ಶಿಗಳಾದ ಎಮ್.ಎಸ್.ಎಂ ಝೈನಿ ಕಾಮಿಲ್ ಸಖಾಫಿ,ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಬಜ್ಪೆ,ಸ್ವಾದಿಕ್ ಮಲೆಬೆಟ್ಟು ಮುಂತಾದ ನಾಯಕರು ಭಾಗವಹಿಸಲಿದ್ದಾರೆಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.