janadhvani

Kannada Online News Paper

ದಮ್ಮಾಮ್;ಜು 11ಕುಟುಂಬ ಸಹಿತ ದಮ್ಮಾಮಿನಲ್ಲಿ ನೆಲೆಸಿದ್ದ ಪರಂಗಿಪೇಟೆ ನಿವಾಸಿ ಮುಹಮ್ಮದ್ ಯೂನುಸ್ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಜುಲೈ 9 ರಂದು ದಮ್ಮಾಮಿನ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ ನಿಧನರಾದರು.

ನಿರಂತರವಾಗಿ ಹಾಸ್ಪಿಟಲಿಗೆ ಭೇಟಿ ನೀಡುತ್ತಾ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಾ, ಇನ್ನಿತರ ಎಲ್ಲಾ ರೀತಿಯಲ್ಲಿ ಕೆಸಿಎಫ್ ದಮ್ಮಾಂ ಸಮಿತಿ ಸಹಾಯ ಸಹಕಾರ ನೀಡುತಿತ್ತು. ಇಂದು ಅವರು ನಮ್ಮನ್ನಗಲಿದ್ದಾರೆ.

ಕುಟುಂಬಸ್ಥರು ಹಾಗೂ ಪತ್ನಿ ಮಕ್ಕಳು ದಮ್ಮಾಮಿನಲ್ಲೇ ಇರುವ ಕಾರಣ ದಫನ ಕ್ರಿಯೆಯನ್ನು ಹೆಚ್ಚು ಕಾಲ ಮುಂದೂಡದೆ ಇದಕ್ಕೆ ಬೇಕಾದ ಎಲ್ಲಾ ದಾಖಲಾತಿಯನ್ನು ಕ್ಲಪ್ತ ಸಮಯಕ್ಕೆ ಸರಿಪಡಿಸಿ ಕೇವಲ ನಾಲ್ಕು ಗಂಟೆಯ ಒಳಗೆ ದಫನ ಕ್ರಿಯೆ ಮಾಡಲು ಕೆಸಿಎಫ್ ಸೌದಿ ಅರೇಬಿಯಾ ಸಾಂತ್ವನ ವಿಭಾಗದ ಚೇರ್ಮೇನ್ ಮೊಹಮ್ಮದ್ ಮಲೆಬೆಟ್ಟು,ದಮ್ಮಾಂ ಝೋನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಭಾಷ ಗಂಗೊಳ್ಳಿ ಅವರು ಸಹಕರಿಸಿದು. ಇನ್ನಿತರ ಕಡತಗಳು ಚಾಲ್ತಿಯಲ್ಲಿದ್ದು ಕೆಸಿಎಫ್ ನಾಯಕರು ಇದರ ಉಸ್ತುವಾರಿಯನ್ನು ವಹಿಸಿದ್ದಾರೆ.

error: Content is protected !!
%d bloggers like this: