janadhvani

Kannada Online News Paper

ಸಂಘ ಸಂಸ್ಥೆಯ ಕಾರ್ಯಕರ್ತರಿಂದ ಅಶ್ರಫ್‌ನ ಮಯ್ಯಿತ್ ದಫನ

ರಿಯಾದ್ : ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೂರು ದಿನಗಳ ಹಿಂದೆ ಹೃದಯಾಘಾತದಿಂದ ಮರಣ ಹೊಂದಿದ ಮೂಲತಃ ಮಂಜೇಶ್ವರ ಉದ್ಯಾವರ ನಿವಾಸಿ ಅಶ್ರಫ್ ಎಂಬವರ ಮಯ್ಯಿತ್ ದಫನ್ ನಿನ್ನೆ (ಗುರುವಾರ) ಮಧ್ಯಾಹ್ನ 2:30 ರ ಹೊತ್ತಿಗೆ ರಿಯಾದ್‌ನ ಮನ್ಸೂರಿಯಾ ಖಬರ್‌ಸ್ಥಾನದಲ್ಲಿ ನಡೆಯಿತು.

ದಫನ ಕಾರ್ಯದಲ್ಲಿ ಹಲವು ಸಂಘ ಸಂಸ್ಥೆಯ ಕಾರ್ಯಕರ್ತರು ಮೃತರ ಬಂಧು ಮಿತ್ರರು ಮತ್ತು
ಹಿತೈಷಿಗಳು ಉಪಸ್ಥಿತಿಯಿದ್ದರು.
ಮೃತ ಆಶ್ರಫ್ ಪತ್ನಿ,ಮೂರು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

ಮಯ್ಯಿತ್ ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಕಡತಗಳನ್ನು ಕೆಎಂಸಿಸಿ ಕಾರ್ಯಕರ್ತರು ಮತ್ತು ಬಂಧು,ಮಿತ್ರರು ನಡೆಸಿದರು.

error: Content is protected !! Not allowed copy content from janadhvani.com