janadhvani

Kannada Online News Paper

ಉತ್ತರ ಕನ್ನಡ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ ಜುಲೈ 12 ಕ್ಕೆ ಅಂಕೋಲದಲ್ಲಿ

ಕುಮಟಾ: ಕರ್ನಾಟಕ ಮುಸ್ಲಿಂ ಜಮಾಅತ್ ಉತ್ತರಕನ್ನಡ ಜಿಲ್ಲಾ ಘೋಷಣ ಸಮಾವೇಶವು ಜುಲೈ 12 ಆದಿತ್ಯವಾರ ಅಂಕೋಲದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ನಡೆಯಲಿದೆ.ಇದರ ಪೂರ್ವಭಾವಿ ಸಭೆಯು ಕುಮಟಾದಲ್ಲಿ ನಡೆಯಿತು. ಸಯ್ಯದ್ ಅಲವಿ ಸಖಾಫಿ ಗಂಗಾವಳಿ ಯವರ ದುಅ ದೊಂದಿಗೆ ಚಾಲನೆ ಗೊಂಡ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉದ್ಘಾಟಿಸಿದರು.

ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು ಮುಸ್ಲಿಂ ಜಮಾಅತ್ ನ ಧ್ಯೇಯ-ಉದ್ದೇಶಗಳ ಬಗ್ಗೆ ವಿವರಣೆ ನೀಡಿದರು.

ಘೋಷಣಾ ಸಮಾವೇಶದ ಯಶಸ್ವಿಗಾಗಿ ಈ ಕೆಳಗಿನವರಿಗೆ ಜವಾಬ್ದಾರಿಗಳನ್ನು ನೀಡಲಾಯಿತು
ಕಾರ್ಯಕ್ರಮದ ಉಸ್ತುವಾರಿಯಾಗಿ ನವಾಸ್ ಅಂಕೋಲಾ ರವರನ್ನೂ ಪ್ರಚಾರ ವಿಭಾಗದ ಉಸ್ತುವಾರಿಯಾಗಿ ನೂರುಲ್ಲಾ ಕುಮಟ ರವರನ್ನೂ ನೇಮಕ ಮಾಡಲಾಯಿತು.

ಹೊನ್ನಾವರ ತಾಲೂಕಿನ ಪ್ರಚಾರದ ಜವಾಬ್ದಾರಿಯನ್ನು ಇಬ್ರಾಹಿಂ ಬಾಯಿ,
ಹಾಶಿಮ್ ಹೊನ್ನಾವರ, ಇರ್ಫಾನ್ ಶೇಕ್ ಹೊನ್ನಾವರ, ಭಟ್ಕಳ ತಾಲೂಕಿನ ಜವಾಬ್ದಾರಿಯಾಗಿ ಕೆ ಎಂ ಶರೀಫ್ ಭಟ್ಕಳ, ಮುಹಮ್ಮದ್ ಗೌಸ್ ಭಟ್ಕಳ. ಕುಮಟಾ ತಾಲೂಕಿನ ಜವಾಬ್ದಾರಿಯಾಗಿ ಖಾದರ್ ಭಾಯ್ ಕಾಗಲ್, ಇಬ್ರಾಹಿಂ ಫಝಲ್, ಇಕ್ಬಾಲ್ ಬಾಯ್ ಇವರಿಗೆ ಜವಾಬ್ದಾರಿಯನ್ನು ನೀಡಲಾಯಿತು.

ಸಭೆಯಲ್ಲಿ ಪ್ರಮುಖರಾದ ಇಮಾಮ್ ಗನಿ ಚಂದಾವರ, ಫಝಲ್ ಬಾಯಿ ಕುಮಟಾ, ಅಬ್ದುಲ್ ಸತ್ತಾರ್ ಮಿರ್ಜಾನ, ಹಾಶಿಮ್ ಹೊನ್ನಾವರ, ಅಬ್ದುಲ್ ಖಾದರ್ ಕಾಗಲ್, ಮೊಹಮ್ಮದ್ ಅಖಿಲ್ ಕುಮಟಾ, ಇಸ್ಮಾಯಿಲ್ ಗಂಗಾವಳಿ, ಹುಸೇನ್ ಮೊಯ್ದಿನ್ ಗಂಗಾವಳಿ, ಫೈಝಲ್ ಅಂಕೋಲಾ, ನವಾಝ್ ಶೇಕ್ ಅಂಕೋಲಾ, ಕೆ ಎಂ ಶರೀಫ್ ಭಟ್ಕಳ, ನೂರುಲ್ಲಾ ಬಾಯಿ ಕುಮಟಾ, ಗಂಗಾವಳಿ ಸೈಯದ್ ಇಕ್ಬಾಲ್, ಮುದಸ್ಸಿರ್ ಕುಮಟಾ, ಆಫ್ತಾಬ್ ಕುಮಟಾ,ಇಬ್ರಾಹಿಂ ಶೇಕ್ ಹೊನ್ನಾವರ, ಫೈಝಲ್ ಕುಮಟಾ ,ಇಬ್ರಾಹಿಂ ಮಿರ್ಜಾನ ಹಾಗೂ ಮುಂತಾದ ನಾಯಕರು ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಕೆ ಎಮ್ ಇಲ್ಯಾಸ್ ನಾವುಂದ ಸ್ವಾಗತಿಸಿದರು, ಉತ್ತರ ಕನ್ನಡ ಜಿಲ್ಲಾ ಮುಸ್ಲಿಂ ಜಮಾಅತ್ ಉಸ್ತುವಾರಿ ಸುಬ್ಹಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ ಎಸ್ ಎಮ್ ಮನ್ಸೂರ್ ವಂದಿಸಿದರು.

error: Content is protected !! Not allowed copy content from janadhvani.com