ವಿಟ್ಲ(ಜನಧ್ವನಿ) : ವಿಟ್ಲ ಫೆಡರೇಷನ್ ಇದರ ಸಕ್ರಿಯ ಸದಸ್ಯ, ಪರೋಪಕಾರಿ, ಸೌದಿ ಅರೇಬಿಯಾದ ದಮ್ಮಾಮಿನಲ್ಲಿ ಹಲವಾರು ವರ್ಷಗಳಿಂದ ಬಹರೈನ್ ಹಾಗು ಸೌದಿ ದಮ್ಮಾಮಿನಲ್ಲಿ ಟ್ಯಾಕ್ಸಿ ಚಾಲಕ ವೃತ್ತಿಯಲ್ಲಿದ್ದ ಬಂಟ್ವಾಳ ತಾಲೂಕಿನ ವಿಟ್ಲ ಒಕ್ಕೆತ್ತೂರು ನಿವಾಸಿ ವಿ.ಎಸ್ ಅಬೂಬಕ್ಕರ್ (ಪುತ್ತುಚ್ಚ 60 ವರ್ಷ) ಹೃದಯಾಘಾತದಿಂದ ಜೂನ್ 7 ರಂದು ದಮ್ಮಾಮಿನ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ ಮೃತಪಟ್ಟಿದ್ದರು.
ವಿಷಯ ತಿಳಿದ ತಕ್ಷಣ KCF ಟೀಮ್ ಸಾಂತ್ವನ ವಿಭಾಗವು ಕೂಡಲೇ ಕಾರ್ಯಪ್ರವರ್ತರಾಗಿ ಮೃತರ ಕುಟುಂಬಸ್ಥರ ಅಪೇಕ್ಷೆಯ ಮೇರೆಗೆ KCF ದಮ್ಮಾಮ್ ಝೋನ್ ನಾಯಕರು ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಪೂರ್ತಿಗೊಳಿಸಿ ದಮ್ಮಾಮಿನಲ್ಲಿ ಅಂತ್ಯಕ್ರಿಯೆ ನಡೆಸಲು ಸಹಕರಿಸಿದರು.
ಕೆ.ಸಿ.ಎಫ್ INC ನಾಯಕರಾದ ರೈಸ್ಕೊ ಅಬೂಬಕ್ಕರ್ ಹಾಜಿ ಹಾಗೂ ಝೋನ್ ಅಧ್ಯಕ್ಷರಾದ ಅಬ್ದುರ್ರಶೀದ್ ಸಖಾಫಿಯವರ ನೇತ್ರತ್ವದಲ್ಲಿ ಕ್ಲಪ್ತ ಸಮಯಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ದಮ್ಮಾಮ್ KCF ರಿಲೀಫ್ ಕನ್ವೀನರ್ ಬಾಷಾ ಗಂಗಾವಳಿ KCF ಸೌದಿ ರಾಷ್ಟ್ರೀಯ ಸಾಂತ್ವನ ವಿಭಾಗದ ಚೆಯರ್’ಮ್ಯಾನ್ ಮುಹಮ್ಮದ್ ಮಲೆಬೆಟ್ಟು, ಸರಿಪಡಿಸಿಕೊಡಲು ಸಹಕರಿಸಿದರು.
ಅದೇ ವೇಳೆ ಬಹರೈನ್ KCF ರಾಷ್ಟ್ರಾಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ರವರು ಸಂಘಟನೆಯ ಸಮಪರ್ಕದಲ್ಲಿದ್ದು ಕೊಂಡು ಎಲ್ಲಾ ರೀತಿಯ ಧೈರ್ಯ ತುಂಬುತ್ತಿದ್ದರು. ಅದೇ ರೀತಿ ಈ ಪುಣ್ಯಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೆ ಕ್ರತಜ್ಞತೆಗಳು, KCF ಸಂಘಟನೆಗೆ ನಾವು ಆಭಾರಿಗಳಾಗಿದ್ದೇವೆ ಎಂದು ತಿಳಿಸುವ,ಅಧ್ಯಕ್ಷರು ಮತ್ತು ಸರ್ವಸದಸ್ಯರು, ವಿಟ್ಲ ಫೆಡರೇಷನ್ (KSA, QATAR, BAHRAIN, & INDIA).















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ