janadhvani

Kannada Online News Paper

ಸುನ್ನೀ ಸಂಘ ಸಂಸ್ಥೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮರ್ಹೂಂ ಅಬ್ಬಾಸ್ ಹಾಜಿ ಸಾಲ್ಮರ

ಮಕ್ಕತುಲ್ ಮುಕರ್ರಮದ ಶರಯಾದಲ್ಲಿ ಕಳೆದ 25 ವರ್ಷಗಳಿಂದ ಟೈಲರ್ ಆಗಿ ದುಡಿಯುತ್ತಿದ್ದ ಅಬ್ಬಾಸ್ ಹಾಜಿ ಸಾಲ್ಮರ ಹೃದಯಾಘಾತದಿಂದ ಮಕ್ಕಾದ ಸೀಸಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಕಾರ್ಯಕಾರಿ ಸದಸ್ಯರು, ಜಬಲನ್ನೂರು ಯೂನಿಟ್ ಅಧ್ಯಕ್ಷರು, ಹಾಗೂ ಮಕ್ಕಾದಲ್ಲಿರುವ ಸುನ್ನೀ ಸಂಘ ಕುಟುಂಬಗಳ ಸಂಸ್ಥೆಗಳಾದ ಮಾಣಿ ದಾರುಲ್ ಇರ್ಷಾದ್, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, ಮುಹಿಮ್ಮಾತ್, ಸಅದಿಯ್ಯ, ಕಾವಲ್ಕಟ್ಟೆ ಅಲ್ ಖಾದಿಸ, ಉಜಿರೆ ಮಲ್ಜಹ್, ಸುರಿಬೈಲ್ ದಾರುಲ್ ಅಶ್ಅರಿಯ್ಯ, ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ, ಸಅದಿಯ್ಯ ಪೌಂಡೇಶನ್ ಬೆಂಗಳೂರು, ಮಂಜನಾಡಿ ಅಲ್ ಮದೀನಾ, ಜಿಸಿಸಿ ಬನ್ನೂರು ಸುನ್ನೀ ಸೆಂಟರ್ ಹೀಗೆ ಹಲವಾರು ಸುನ್ನೀ ಸಂಘ ಸಂಸ್ಥೆಯಲ್ಲಿ ನೇತೃತ್ವ ನೀಡಿ ಸಹಾಯ ಸಹಕಾರ ಮಾಡುತಿದ್ದ ಸೌಮ್ಯ ಸ್ವಭಾವದ ಒರ್ವ ಕೊಡುಗೈ ದಾನಿಯಾಗಿದ್ದರು ಅಬ್ಬಾಸ್ ಹಾಜಿ. ದಮ್ಮಾಂ ಹಾಗೂ ಮಕ್ಕಾದಲ್ಲಿ ಅನಿವಾಸಿಯಾಗಿ 35 ವರ್ಷಗಳ ಕಾಲ ನೆಲೆಸಿ ಕೊನೆಗೆ ಫೈನಲ್ ಎಕ್ಸಿಟ್ ಮಾಡಿ ಊರಿಗೆ ಹೋಗಲು ಎಂಬಸ್ಸಿ ಹಾಗೂ ಕೆಸಿಎಫ್ ಸೌದಿ ಅರೇಬಿಯಾ ಆಯೋಜಿಸುತ್ತಿರುವ ಚಾರ್ಟೆಡ್ ವಿಮಾನದಲ್ಲಿ ಹೆಸರು ಕೂಡಾ ನೋಂದಾವಣೆ ಮಾಡಿದ್ದರು. ಆದರೆ.., ಅಲ್ಲಾಹುವಿನ ವಿಧಿಯೇ ಬೇರೆಯಾಗಿತ್ತು, ಅಲ್ಲಾಹುವಿನ ವಿಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ಇಲಾಖೆಯ ಸಹಕಾರದಿಂದ ಊರಿನಿಂದ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಜೂನ್.14 ರಂದು ಮಕ್ಕಾ ಶರಯಾದಲ್ಲಿ ದಫನ್ ಪ್ರಕ್ರಿಯೆ ನಡಸಲಾಯಿತು. ದಫನ್ ವಿಧಿ ವಿಧಾನಗಳ ಸಂದರ್ಭದಲ್ಲಿ ಮಕ್ಕಾದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅವರು ಸ್ನೇಹಿತರು ಪಾಲ್ಗೊಂಡಿದ್ದರು.

ಮೃತರಿಗೆ ಪತ್ನಿ, ಮೂರು ಗಂಡು ಮಕ್ಕಳು, ಒಬ್ಬ ಮಗ ಕೆಲವು ವರ್ಷಗಳ ಹಿಂದೆ ಅಪಘಾತೊಂದರಲ್ಲಿ ಮರಣ ಹೊಂದಿದ್ದರು. ಮೃತರ ಹೆಸರಿನಲ್ಲಿ ಮಯ್ಯಿತ್ ನಮಾಝ್, ತಹ್ಲೀಲ್, ಕುರ್’ಆನ್ ಓದಿ ಮಗ್ಫಿರತ್ಗಾಗಿ ದುಆ ಮಾಡಲು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com