janadhvani

Kannada Online News Paper

ಗಲ್ಫ್ ಯೂತ್ ಕಬಕ ಜಮಾಅತ್: ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಬಗ್ಗುಮೂಲೆ

ಗಲ್ಫ್ ಯೂತ್ ಕಬಕ ಜಮಾಹತ್ ಇದರ 5ನೇ ವಾರ್ಷಿಕ ಮಹಾ ಸಭೆಯು ಜೂನ್ 5 ರಂದು ವ್ಯಾಟ್ಸಾಪ್ ಆನ್ಲೈನ್ ಮುಖಾಂತರ ನಡೆಯಿತು. ಈ ಒಂದು ಸಭೆಯನ್ನು ಹಿರಿಯ ಸದಸ್ಯರಾದ ಮೌಲಾನಾ ರಝಕ್ ಹಾಜಿ ರವರು ದುಆ ಮೂಲಕ ಉಧ್ಘಾಟನೆ ಮಾಡಿ ಸಭೆಗೆ ಚಾಲನೆ ನೀಡಿದರು.

ನಂತರ ನಿರ್ಗಮಿತ ಅಧ್ಯಕ್ಷರಾದ ರವೂಫ್ ಯು.ಎ.ಇ ಯವರು ಸ್ವಾಗತ ಭಾಷಣ ಮಾಡಿದರು..ನಂತರ ಕಮಿಟಿಯನ್ನು ಪುನರ್ ಪರಿಶೀಲಿಸಿ ಒಂದು ವರ್ಷದ ಅವಧಿಗೆ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು..

ಗೌರವಾದ್ಯಕ್ಷರುಗಳು: ರಝಕ್ ಹಾಜಿ ಮೌಲಾನಾ ,ಮಹಮ್ಮದ್ ಸಿತಾರ್ ,ಇಸ್ಮಾಯಿಲ್ ಬ್ರೈಟ್

ಸಲಹಾ ಮುಖ್ಯಸ್ತರು: ಉಸ್ಮಾನ್ ಮಸ್ಕಟ್, ಮಮ್ಮು ಬೊಲ್ವರ್, ಅನ್ವರ್ ಮಸ್ಕಟ್

ಸಂಚಾಲಕರು:ಬಶೀರ್ ಹಾಜಿಅಬುದಾಬಿ,ರವೂಫ್ ಮಾಸ್ಟರ್, ಅಮ್ಜದ್ ಖಾನ್

ಅದ್ಯಕ್ಷರು:ಇಸ್ಮಾಯಿಲ್ ಬಗ್ಗುಮೂಲೆ

ಉಪಾದ್ಯಕ್ಷರು: ಅಸ್ಲಮ್ ಸಿತಾರ್, ಆಶಿಕ್ ಕತಾರ್

ಕಾರ್ಯದರ್ಶಿ:ರಫೀಕ್ KP

ಜೊತೆ ಕಾರ್ಯದರ್ಶಿ: ರಝಕ್ ದುಬೈ, ಬದ್ರುದ್ದೀನ್ ಮದೀನಾ

ಕೋಶಾಧಿಕಾರಿ: ಕಲಂದರ್ ಯೂಸುಫ್

ಜೊತೆ ಕೋಶಾಧಿಕಾರಿ: ನಝೀರ್ ದಿಲ್, ಶಮೀರ್ ಫರ್ಹಾನ್

ಲೆಕ್ಕಪರಿಶೋಧಕ : ಅಸಿಫ್ ಬಗ್ಗುಮೂಲೆ
ಮಾದ್ಯಮ ವಕ್ತಾರರು: ಶೌಕತ್ ವಿದ್ಯಾಪುರ

ಕ್ಯಾಬಿನೆಟ್ ಸಲಹಾ ಸದಸ್ಯರುಗಳು :
ರಫೀಕ್ ಬ್ರೈಟ್, ಸುಲೈಮಾನ್ ಕಬಕಕಾರ್ಸ್, ನೌಶಾದ್ ಪೋಳ್ಯ , ಸುಲೈಮಾನ್ ಓಜಲ ಕತಾರ್ ,ಅಬೂಬಕ್ಕರ್ ಕಲ್ಲಂದಡ್ಕ, ಶರೀಫ್ ತವಕ್ಕಲ್, ಹಾರಿಸ್ ಬಗ್ಗುಮೂಲೆ, ನೌಶೀಕ್, ಸಮೀರ್ ಕರ್ನಾಟಕ , ಅಶ್ರಫ್ ಯುನೈನ್.

ಊರಿನ ಪ್ರತಿ ನಿಧಿಗಳು: ಖಾದರ್ ಭಾರತ್, ಸಿದ್ದೀಕ್ HKBK , ಫಾರೂಕ್ ವಿದ್ಯಾಪುರ, ಶಾಕಿರ್ ಸೆಲೆಕ್ಟೆಡ್.

ಈ ಒಂದು ಸಮಿತಿ 4 ವರ್ಷಗಳ ಹಿಂದೆ ಕಬಕದ ಕೆಲ ಉತ್ಸಾಹಿ ಯುವಕರ ಮುಖಾಂತರ ವಿವಿಧ ದೇಶದಲ್ಲಿ ದುಡಿಯುತ್ತಿರುವ ಕಬಕದ ಅನಿವಾಸಿ ಭಾರತೀಯರನ್ನು ಆನ್ಲೈನ್ ಮುಖಾಂತರ ಒಗ್ಗೂಡಿಸಿ ಜಮಾಹತಿನಲ್ಲಿರುವ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸಲುವಾಗಿ ಸ್ಥಾಪಿತ ಸಮಿತಿಯೇ ಗಲ್ಫ್ ಯೂತ್ ಕಬಕ …ಇದೀಗ ಯಶಸ್ವಿಯಾಗಿ 4 ವರ್ಷ ಪೂರೈಸಿ ಸುಮಾರು 150ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡು 5ನೇ ವರ್ಷಕ್ಕೆ ಕಾಲಿಡುತ್ತಿದೆ…ಈಗಾಗಲೇ ಜಮಾಹತಿಗೊಳಪಟ್ಟವರ ಬಡವರಿಗೆ ಹಲವಾರು ಸಹಾಯ ಹಸ್ತ ಚಾಚಿದೆ ..ಇನ್ನು ಮುಂದೆಯೂ ಚಾಚಲಿದೆ ಇನ್ಷಾ ಅಲ್ಲಾಹ್..ಈ ಒಂದು ಸಮೀತಿಯಯ ಮುಖ್ಯ ಉದ್ದೇಶ ಜಮಾಹತಿನಲ್ಲಿರುವ ಬಡನಿರ್ಗತಿಕ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸುವುದು..ಇದರ ವೇದವಾಕ್ಯವೇ “ನಾವು ಬಡನಿರ್ಗತಿಕರ ಪರ” ಎಂಬುದಾಗಿದೆ.

ಸಮೀತಿ ರಚನಾ ಕಾರ್ಯಕ್ರಮವನ್ನು ಅಮ್ಜದ್ ಖಾನ್ ಪೋಳ್ಯ ನಿರೂಪಿಸಿದರು, ನೂತನ ಅಧ್ಯಕ್ಷರು ಇಸ್ಮಾಯಿಲ್ ಬಗ್ಗುಮೂಲೆ ಧನ್ಯವಾದ ಸಮರ್ಪಿಸಿದರು ಮತ್ತು ಹಸನ್ ದಾರಿಮಿ ದುವಾದೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು…

ಗಲ್ಫ್ ಯೂತ್ ಕಬಕ ಜಮಾಅತ್
(ನಾವು ಬಡ ನಿರ್ಗತಿಕರ ಪರ)

error: Content is protected !! Not allowed copy content from janadhvani.com